​​ಮನೆಮದ್ದು, Kitchen remedies or Home remedies.

​ಮನೆಮದ್ದು

ಮನೆಮದ್ದು
1. ಅರಿಶಿಣ
2. ಈರುಳ್ಳಿ
3. ಕರಿಬೇವು
4. ಕಾಳುಮೆಣಸು
5. ಕೊತ್ತಂಬರಿ
6. ಜೀರಿಗೆ
7. ಜೇನುತುಪ್ಪ
8. ತೆಂಗು
9. ತುಪ್ಪ
10. ತುಳಸೀ
11. ದ್ರಾಕ್ಷಿ
12. ನಿಂಬೆಹಣ್ಣು
13. ಬೆಲ್ಲ
14. ಬೆಳ್ಳುಳ್ಳಿ
15. ಮಜ್ಜಿಗೆ
16. ಮೆಂತೆ
17. ಲವಂಗ
18. ವೀಳ್ಯದೆಲೆ
19. ಶುಂಠಿ
20. ಹಿಪ್ಪಲಿ
21. ಹಿಂಗು

ಮನೆಮದ್ದು-ದ್ರವ್ಯಗಳ ಪರಿಚಯ
01 01 ಅರಿಶಿಣ

01. ಅರಿಶಿಣ, ಸಂಸ್ಕೃತ: ಹರಿದ್ರಾ: ಪ್ರಿಯಕ, ಹರಿದ್ರುಮ ಕ್ಷಂದ, ಗೌರಿ, ಕಾಂಚನಿ, ಕ್ರಿಮಿಘ್ನ ಮತ್ತು ಶಾರ್ವರಿ.
ಸಸ್ಯಶಾಸ್ತ್ರೀಯಮೂಲ:  Curcuma longa Linn.

ಅರಿಶಿಣವು ಆಂಟಿ-ಇಂಪ್ಲಾಮೇಟರಿ;ಆಂಟಿಫ್ಲೋಜಿಸ್ಟಿಕ್ಸ್ ಮತ್ತು ಡಿಫ್ಲಾಮೇಟರೀಸ್ ಗುಣಹೊಂದಿದ್ದು  ನೋವುನಿವಾರಕವಾಗಿದೆ, ಅರಿಶಿಣವು ಉರಿಯೂತ ಕಡಿಮೆಮಾಡಿ ನೋವುನಿವಾರಿಸುವುದು. ಅರಿಶಿಣವು ಮೆದುಳಿಗೆ ನೋವಿನಸಂಕೇತ ತಡೆದು ಸಿಎನ್ನೆಸ್;ಕೇಂದ್ರನರಮಂಡಲದ ಮೇಲೆ ಪರಿಣಾಮ ಬೀರುವುದು. ಚೊಲಗಾಗ್; ರಕ್ತವಾಹಿ ವ್ಯವಸ್ಥೆಯಿಂದ ಪಿತ್ತರಸ ಹೊರಹಾಕುವ ಕ್ರಿಯೆಯ ಉತ್ತೇಜಿಸಿ ಶುದ್ಧಿಗೊಳಿಸುವುದು. ಹೆಪಟೊಪ್ರೊಟೆಕ್ಷನ್;ಆಂಟಿಹೆಪಟೊಟಾಕ್ಸಿಸಿಟಿ. ಯಕೃತ್ತಿನ ಹಾನಿಯ ತಡೆಯುವುದು ಬ್ಲಡ್ಪ್ಯೂರಿಫೈಯರ್;ರಕ್ತಶೋಧಕ, ಆಂಟಿಆಕ್ಸಿಡೆಂಟ್;ಅರಿಶಿಣವು ನೈಸರ್ಗಿಕ ಉತ್ಕರ್ಷಣ ನಿರೋಧಕ ಪದಾರ್ಥ, ಅದು ಜೀವಕೋಶದ ಹಾನಿಯ ತಡೆಯುವುದು ಅಥವಾ ವಿಳಂಬ ಗೊಳಿಸಬಹುದು. ಹಣ್ಣು ಮತ್ತು ತರಕಾರಿ ಸೇರಿದಂತೆ ಅನೇಕ ಆಹಾರಗಳಲ್ಲಿ ಉತ್ಕರ್ಷಣ ನಿರೋಧಕ ಕಂಡುಬರುತ್ತವೆ. ಅವು ಆಹಾರ ಪೂರಕವಾಗಿ ಲಭ್ಯವಿದೆ. ಕರಿಬೇವು, ಬೀಟಾಕೆರೋನ್ ಉತ್ಕರ್ಷಣ ನಿರೋಧಕಗಳ ಉದಾಹರಣೆಯಲ್ಲಿ ಸೇರಿದೆ, ಡೀಟಾಕ್ಸಿಫೈಯರ್;ಅರಿಶಿಣವು ವಿಷಕಾರಿಗುಣಗಳ ಎದುರಿಸಿ ಅಥವಾ ನಾಶಪಡಿಸಲು, ಪಿತ್ತಜನಕಾಂಗದಿಂದ ನಿರ್ವಿಷಗೊಳ್ಳುವ ಪದಾರ್ಥವಾಗಿದೆ. ಪಿತ್ತಜನಕಾಂಗದ ಅಂಗಾಂಶದ ಪುನರುತ್ಪಾದಕ. ಆಂಟಿಅಸ್ತಮ್ಯಾಟಿಕ್;ಅಸ್ತಮಾಗುಣಕಾರಿ, ಕ್ಯಾನ್ಸರ್-ತಡೆಯುವಗುಣ ಹೊಂದಿದೆ, ಚರ್ಮರೋಗ ಗುಣಮಾಡುವುದು, ಅತಿಸಾರ, ಜೀರ್ಣಕ, ಉದರವಾಯು ನಿರೋಧಕ, ಕೊಲೆಸ್ಟ್ರಾಲ್ ತಡೆಯುವುದು, ಆಂಟಿಪ್ಲೇಟ್ಲೆಟ್;ಅರಿಶಿಣವು ರಕ್ತವು ನೀರಿನಂತೆ ತೆಳುಮಾಡುವ ಗುಣಹೊಂದಿದ್ದು ಹೃದಯತೊಂದರೆ ತಡೆಯುವುದು, ಅರಿಶಿಣವು ರಕ್ತದಕಣವಾದ ಲಿಂಫೋಸೈಟ್ಸ್ಗಳ ಡಿಎನ್ಎ ಹಾನಿಯಿಂದಲು ರಕ್ಷಿಸುವುದು. ಡಿಸ್ಪೆಪ್ಸಿಯಾ;ಜೀರ್ಣಕಾರಿ ಕ್ರಿಯೆಯ ಅಸ್ವಸ್ಥತೆ, ಅಜೀರ್ಣವು ತನ್ನ ಸ್ಥಿತಿಗೆಬದಲಾಗಿ ಗ್ಯಾಸ್ಟ್ರೋಫೇಜಿಲ್ರಿಫ್ಲೆಕ್ಸ್ಕಾಯಿಲೆ(ಜಿಇಆರ್ಡಿ) ಹುಣ್ಣು ಅಥವಾ ಪಿತ್ತಕೋಶದ ಕಾಯಿಲೆಯಂತಹ ಆಧಾರವಾಗಿರುವ ಸಮಸ್ಯೆಯ ಸಂಕೇತವಾಗಿದೆ. ಕೆಂಡದಮೇಲೆ ಅರಿಶಿಣಪುಡಿಯ ಹಾಕಿ ಹೊಗೆಯನ್ನು ಮೂಗಿನಿಂದ ಘ್ರಾಣವಾಗಿ ಸೇವಿಸಲು ಕಟ್ಟಿದಮೂಗು ಅನಾವೃತಗೊಳಿಸಿ ಶೀತ ನಿವಾರಿಸುವುದು. ತ್ವಚೆ ಮತ್ತು ಚರ್ಮರೋಗದಲ್ಲಿ, ಚೇಳು ಮತ್ತು ಕ್ರಿಮಿಗಳ ಕಡಿತದಲ್ಲು ಮೈಕೈನೋವು, ಪಿತ್ತರಸವ ಪಿತ್ತಕೋಶದಿಂದ ಬಿಡುಗಡೆಗೊಳಿಸುವುದು. ಯಕೃತ್ವ್ಯಾಧಿಯಲ್ಲಿ, ರಕ್ತಶುದ್ಧಿಕರ, ಪ್ರತಿಉಪಚಾಯಕ: ಆಂಟಿಆಕ್ಸಿಡಂಟ್;ಆಕ್ಸಿಡೀಕರಣವನ್ನ ತಡೆಯುವ ಅಥವಾ ಆಮ್ಲಜನಕ ಅಥವಾ ಪೆರಾಕ್ಸೈಡ್ ಗಳಿಂದ ಉತ್ತೇಜಿಸಲ್ಪಟ್ಟ ಪ್ರತಿಕ್ರಿಯೆಗಳ ತಡೆಯುವವಸ್ತು. ವಿಷಹರಣ;ಡೀಟಾಕ್ಸಿಫೈ, ಅಸ್ತಮಾ, ಏಕಕೋಶಿಕ ಕ್ರಿಮಿ: ಪ್ರೋಟೊಜೊವ ನಿವಾರಕ, ಹೊಟ್ಟೆಯಲ್ಲಿನ ಉದರವಾಯು;ಗ್ಯಾಸ್ ನಿವಾರಕ: ಕಾರ್ಮಿನೇಟಿವ್;ಉದರವಾಯು ನಿರ್ಮೂಲನೆ, ಹೊಟ್ಟೆಯಲ್ಲಿ ವಾಯುಉತ್ಪನ್ನ ತಡೆಯುವುದು, ವರ್ಣತಂತುಗಳ ರಕ್ಷಾತ್ಮಕ:ಡಿಎನ್ಎ ಹಾನಿ ತಡೆಯುವಲ್ಲಿಯೂ ಅರಿಶಿಣವು ಪರಿಣಾಮಕಾರಿ. ಮುಖದ ಮೊಡವೆಯ ಸಮಸ್ಯೆಯಲ್ಲಿ ಅರಿಶಿಣಪುಡಿ ಮತ್ತು ನಿಂಬೆರಸ ಅಥವಾ ಅರಿಶಿಣಪುಡಿ ನೀರಿನೊಂದಿಗೆ ಅಥವಾ  ಅರಿಶಿಣಪುಡಿಯನ್ನು ಎಣ್ಣೆಯೊಂದಿಗೆ ತೇಯ್ದು ಮುಖಕ್ಕೆಹಚ್ಚಿ ಪ್ರಯೋಗಿಸಬೇಕು. ಆಹಾರದ ರೂಪದಲ್ಲಿ ಅರಿಶಿಣ ಬಳಸುವುದರಿಂದ ಮೂತ್ರವಿಕಾರ, ರಕ್ತದ ಕೊಲೆಸ್ಟ್ರಾಲ್ ಕಡಿಮೆಮಾಡಿ ಮತ್ತು ಮಧುಮೇಹ ನಿಯಂತ್ರಕ. ಅರಿಶಿಣವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು; ಆಂಟಿಬಯೋಟಿಕ್; ಬ್ಯಾಕ್ಟೀರಿಯ ಬೆಳವಣಿಗೆತಡೆದು, ರೋಗಕಾರಕ ಸೂಕ್ಷ್ಮಜೀವಾಣುನಾಶಕ,  ನಂಜುನಿವಾರಕ. ಅರಿಶಿಣವು ರಕ್ತಶುದ್ಧಿಕರವಾಗಿದ್ದು ರಕ್ತದಲ್ಲಿನ ಕೊಲೆಸ್ಟ್ರಾಲ್ಅನ್ನೂ ಕೂಡ ನಿಯಂತ್ರಿಸುವುದು. ಆಂಟಿಪ್ಲೇಟ್ಲೆಟ್;ಅರಿಶಿಣವು ರಕ್ತವು ನೀರಿನಂತೆ ತೆಳುಮಾಡುವ ಗುಣವು ಹೃದ್ರೋಗದಲ್ಲಿ ಅತ್ಯಂತ ಉಪಯೋಗಿ. ಚರ್ಮರೋಗಗಳಲ್ಲಿ ಅರಿಶಿಣಪುಡಿ, ಎಳ್ಳೆಣ್ಣೆಯೊಂದಿಗೆ ಸೇರಿಸಿದರೆ ಉಪಯೋಗಿ.

02 02 ಈರುಳ್ಳಿ
02. ಈರುಳ್ಳಿ/ ನೀರುಳ್ಳಿ, ಸಂಸೃತ: ಪಲಾಂಡು, ದುರ್ಘಂಧ ಸಸ್ಯಶಾಸ್ತ್ರೀಯಮೂಲ:  Allium cepa Linn.
ಆಂಟಿಬಯೋಟಿಕ್;ಬ್ಯಾಕ್ಟೀರಿಯ ಬೆಳವಣಿಗೆತಡೆದು, ರೋಗಕಾರಕ ಸೂಕ್ಷ್ಮಜೀವಾಣುನಾಶಕ, ನಂಜುನಿವಾರಕ. ಆಂಟಿಪ್ಲೇಟ್ಲೆಟ್;ರಕ್ತವನ್ನು ನೀರಿನಂತೆ ತೆಳುಮಾಡುವ ಗುಣಹೊಂದಿದೆ. ಇದು ಹೃದ್ರೋಗದಲ್ಲಿ ಅತ್ಯಂತ ಉಪಯೋಗಿ. ಪ್ರತಿಸ್ಕಂದಿ;ರಕ್ತದೊತ್ತಡವನ್ನು ಕಡಿಮೆ ಮಾಡುವುದು. ಈರುಳ್ಳಿಯನ್ನು ಜೇನುತುಪ್ಪದೊಡನೆ ಸೇವಿಸಿದರೆ ದಮ್ಮು, ಕೆಮ್ಮು ಕಫನಿವಾರಕ, ಹಳೆಯಶೀತ, ನೆಗಡಿಯ ಪರಿಹರಿಸುವುದು. ಕಾರ್ಮಿನೇಟಿವ್;ಈರುಳ್ಳಿಯು ಹೊಟ್ಟೆಯ ಉದರವಾಯು; ಗ್ಯಾಸ್ ನಿವಾರಕ, ಹೊಟ್ಟೆನೋವು, ಮೂತ್ರವರ್ಧಕ, ಜೀರ್ಣಕಾರಿ. ಇದು ಕ್ರಿಮಿಕೀಟದಿಂದಾದ ಭಾದೆನಿವಾರಿಸುವುದು, ಸೊಳ್ಳೆಕಡಿದ ಜಾಗಕ್ಕೆ ಈರುಳ್ಳಿಯ ರಸಹಚ್ಚಿದರೆ ಉರಿಯು ಕಡಿಮೆಯಾಗುವುದು.

03 03 ಏಲಕ್ಕಿ
03. ಏಲಕ್ಕಿ, ಇಲಾಯ್ಚಿ, ಸಂಸೃತ: ಏಲಾ, ಸುಕ್ಷ್ಮೈಲಾ, ಕ್ಷುದ್ರೈಲಾ, ಭೃಂಗಪರ್ಣಿಕಾ, ದ್ರಾವಿಡಿ, ಪೃಥ್ವಿಕಾ, ತ್ರಿಪುಟಾ ತೃಟಿ, ಉಪ್ಕುಂಚಿಕಾ, ಸಸ್ಯಶಾಸ್ತ್ರೀಯಮೂಲ:  Elettaria cardamomum Maton.
ಅಸ್ತಮಾ, ಉಪಚ, ಅಜೀರ್ಣ, ಗ್ಯಾಸ್ಟ್ರಿಕ್ ತೊಂದರೆ, ಅಗ್ನಿಮಂಥ, ಮಂದಾಗ್ನಿ ಹೊಟ್ಟೆನೋವು. ಏಲಕ್ಕಿಪೇಸ್ಟ್ಆಗಿ ಬಳಸಿದರೆ ಬಾಮ್ನಂತೆ ಹಣೆಗೆ ಹಚ್ಚಿದರೆ ತಲೆನೋವಿನಲ್ಲಿ ಉಪಯೋಗಿ. ತಡೆಮೂತ್ರ ಮತ್ತು ಉರಿಮೂತ್ರ ತೊಂದರೆಯಿದ್ದರೆ, ಏಲಕ್ಕಿಬೀಜಗಳನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ಮೂತ್ರರೋಗ ಶಮನವಾಗುತ್ತವೆ. ಏಲಕ್ಕಿಸಿಪ್ಪೆಯು ಆಮವಾತ, ಸಂಧಿವಾತ, ಕೀಲುನೋವು ನಿವಾರಕ.

04 04 ಕರಿಬೇವು
04. ಕರಿಬೇವು, ಸಿಹಿಬೇವು ಸಂಸೃತ: ಸುರಭಿಣಿ, ಕೈಡರ್ಯ:  ಸಸ್ಯಶಾಸ್ತ್ರೀಯಮೂಲ: Murraya koenigii (Linn.) Spreng.
ಕರಿಬೇವು ಜಠರಾಂತ್ರಿಕ ಉದರಸಂಬಂಧೀ ಆಮಾಶಯ ವ್ಯಾಧಿಗಳಲ್ಲಿ ಬಹುಪಯೋಗಿ. ಹೊಟ್ಟಿಹಸಿವು ಹೆಚ್ಚಿಸಿ ಆಹಾರಜೀರ್ಣಿಸಲು ಸಹಕಾರಿ. ಪ್ರೋಟೊಜೊವ, ಮತ್ತು ಆಂಟಿಪ್ಯಾಥೋಜನಿಕ್;ಬ್ಯಾಕ್ಟೀರಿಯ ಬೆಳವಣಿಗೆಯ ತಡೆದು, ರೋಗಕಾರಕ ಸೂಕ್ಷ್ಮಜೀವಾಣುನಾಶಕ, ಏಕಕೋಶಿಕ ಸೂಕ್ಷ್ಮಾಣು, ಶಿಲೀಂಧ್ರ-ಸೂಕ್ಷ್ಮಾಣುನಾಶಕ,  ನಂಜುನಿವಾರಕ. ಆಂಟಿಡಿಸೆಂಟ್ರಿ;ಅತಿಸಾರ, ಆಮಾತಿಸಾರ. ಎಲೆಯ ಪೇಸ್ಟ್ಅನ್ನು ತ್ವಚೆಯು ಬಿರುಸಾಗಿ ಒಡೆಯುವುದನ್ನು ತಡೆಯುವುದು. ಬಾಯಿಯಹುಣ್ಣು;ಮೌತ್ಅಲ್ಸರ್ ನಿವಾರಿಸುವುದು. ಕರಿಬೇವಿನ ‘ಬೀಟ-ಕೆರೋಟಿನ್’ಅಂಶವು ನಮ್ಮದೇಹದಲ್ಲಿ ವಿಟಮಿನ್ ‘ಎ’ ಆಗಿ ಪರಿವರ್ತನೆಯಾಗಿಸುವುದು. ಅಡುಗೆ ಎಣ್ಣೆಯಲ್ಲಿ ಕರಿದರೆ ಕರಿಬೇವಿನ ‘ಬೀಟ-ಕೆರೋಟಿನ್’ ಅಂಶ ನಷ್ಟವಾಗುವುದು. ಹಾಗಾಗಿ ಹಸಿ ಕರಿಬೇವು ಬಳಸುವುದೇ ಸೂಕ್ತ. ಕರಿಬೇವು ರಕ್ತವರ್ಧಕ ಅನೀಮಿಯದಲ್ಲಿ ಉಪಯೋಗಿ, ಮೆಂತೆಪುಡಿಯೊಂದಿಗೆ ಸೇವಿಸಿದರೆ ಮಧುಮೇಹ ನಿಯಂತ್ರಕ, ಕರಿಬೇವಿನ ಎಲೆಗಳನ್ನು ಕೊಬ್ಬರಿಎಣ್ಣೆಯಲ್ಲಿ ಬಿಸಿಮಾಡಿ ತಲೆಕೂದಲಿಗೆಹಚ್ಚಿದರೆ ಕೂದಲು ಸೊಂಪಾಗಿ ಬೆಳೆಯುವುದು. ಪ್ರತಿನಿತ್ಯ ಆಹಾರದೊಂದಿಗೆ ಬಳಸಿದರೆಯೊಗ್ಯ ಕರುಳಿನ ಆರೋಗ್ಯ, ಯಕೃತ್ತಿನ ಆರೋಗ್ಯ ಕಾಪಾಡುವುದು. ಆಂಟಿಸ್ಪಾಸ್ಮೋಡಿಕ್; ಹೊಟ್ಟೆನೋವಿರುವಾಗ ಕಿಬ್ಬೊಟ್ಟೆಯ ಸ್ನಾಯು ಅಥವಾ ನೋವಿನ ಸೆಳೆತ ನಿವಾರಿಸುವುದು.

05 05 ಕಾಳುಮೆಣಸು
05. ಕಾಳುಮೆಣಸು;ಕರಿಮೆಣಸು, ಸಂಸ್ಕೃತ: ಮರೀಚ. ಉಷ್ಣ, ಸುವೃತ, ಕೃಷ್ಣಾ  ಸಸ್ಯಶಾಸ್ತ್ರೀಯಮೂಲ: Piper nigrum Linn.
ಸ್ಟಿಮುಲಂಟ್ಸ್;ಉತ್ತೇಜಕ (ಧನಿಯಾ, ಕಾಫಿ, ಟೀ, ಅಡಿಕೆ, ಐಸ್ಕ್ರೀಂ) ಮೆದುಳು ಮತ್ತು ದೇಹದ ನಡುವಿನ ಸಂದೇಶ ವೇಗಗೊಳಿಸಿ ವ್ಯಕ್ತಿಯ ಹೆಚ್ಚುಎಚ್ಚರ, ಆತ್ಮವಿಶ್ವಾಸದ ಅನುಭವ ನೀಡುವುದು. ಕಾಳುಮೆಣಸು ಜಠರಕರುಳಿನ ಉತ್ತೇಜಕ, ಕಾರ್ಮಿನೇಟಿವ್;ಉದರವಾಯು ನಿರ್ಮೂಲನೆ ಮಾಡುವುದು, ಹೊಟ್ಟೆಯಲ್ಲಿ ವಾಯುಉತ್ಪನ್ನ ತಡೆಯುವುದು, ಮೂತ್ರವರ್ಧಕ ವಾಗಿಯೂ ಉಪಯೋಗಿ, ಗಾರ್ಗಲ್ಆಗಿ ಗಂಟಲುನೋವು ನಿವಾರಕ, ಅಗ್ನಿಮಾಂದ್ಯ, ಮಂದಾಗ್ನಿ, ಅಜೀರ್ಣ, ಅಪಚ ಹೋಗಲಾಡಿಸುವುದು. ಕಾಲರಾ:ಕಾಲರಾ ಕಾಯಿಲೆಯು ಸಣ್ಣಕರುಳಿನ ಸಾಂಕ್ರಾಮಿಕ ಮಾರಕ ಬ್ಯಾಕ್ಟೀರಿಯಾದ ಸೂಕ್ಷ್ಮಜೀವಾಣು ಕಾಯಿಲೆ,  ನಂಜುನಿವಾರಕ. ಸಾಮಾನ್ಯವಾಗಿ ಸೋಂಕಿತ ನೀರಿನಬಳಕೆಯಿಂದ ಕಾಲರಾ ಹರಡಿ ತೀವ್ರತರನಾದ ಅತಿಸಾರಕ್ಕೆ ಕಾರಣವಾಗುವುದು. ಸಿಯಾಲಗಾಗ್;ಲಾಲಾಕಾರಕ, ಜೊಲ್ಲುರಸ ಸ್ರವಿಕೆಯ ಉತ್ತೇಜಿಸುವುದು, ಬೆಖಿಕ್:ಕೆಮ್ಮು, ಅಸ್ತಮಾ, ದಮ್ಮು, ಜ್ವರ, ಅಜೀರ್ಣಗಳಲ್ಲಿ ಉಪಯೋಗಿ,
ಕಾಳುಮೆಣಸಿನಎಣ್ಣೆ:- ಬಾಹ್ಯವಾಗಿ ಚರ್ಮರೋಗಗಳಲ್ಲಿ ಉತ್ತೇಜಕವಾಗಿ ಉಪಯೋಗಿ.

06 06 ಕೊತ್ತಂಬರಿ
06. ಕೊತ್ತಂಬರಿ/ಧನಿಯಾ, ಸಂಸ್ಕೃತ: ಧಾನ್ಯಕ, ಕುಷ್ಟುಂಬುರು, ಧಾನಿಕ, ಧಾನ್ಯ ಸಸ್ಯಶಾಸ್ತ್ರೀಯಮೂಲ: Coriandrum sativum Linn
ಕೊತ್ತಂಬರಿ ಬೀಜದಪುಡಿ:- ಸ್ಟಿಮುಲಂಟ್ಸ್;ಉತ್ತೇಜಕ (ಧನಿಯಾ, ಕಾಫಿ, ಟೀ, ಅಡಿಕೆ, ಐಸ್ಕ್ರೀಂ) ಮೆದುಳು ಮತ್ತು ದೇಹದನಡುವಿನ ಸಂದೇಶ ವೇಗಗೊಳಿಸಿ ವ್ಯಕ್ತಿಯ ಹೆಚ್ಚು ಎಚ್ಚರ, ಆತ್ಮವಿಶ್ವಾಸದ ಅನುಭವ ನೀಡುವುದು. ಕಾರ್ಮಿನೇಟಿವ್; ಉದರವಾಯು ನಿರ್ಮೂಲನೆ ಮಾಡುವುದು, ಹೊಟ್ಟೆಯಲ್ಲಿ ವಾಯುಉತ್ಪನ್ನ ತಡೆಯುವುದು, ಡೈಯುರಿಟಿಕ್;ಮೂತ್ರವಿಸರ್ಜಕ. ಕೊತ್ತಂಬರಿ ಬೀಜವು ಮಧುಮೇಹ ನಿಯಂತ್ರಕ, ಉರಿಯೂತ ಕಡಿಮೆಮಾಡುವುದು. ಆಂಟಿ-ಸ್ಪಾಸ್ಮೋಡಿಕ್;ಹೊಟ್ಟೆನೋವು ಇದ್ದಾಗ ಕಿಬ್ಬೊಟ್ಟೆಯ ಸ್ನಾಯುನೋವಿನ ಸೆಳೆತ ನಿವಾರಿಸುವುದು. ಮೂತ್ರವರ್ಧಕವೂ ಹೌದು. ಉರಿಯೂತ;ಬಾವುನಿವಾರಿಸಿ. ಕ್ಷುದಾವರ್ಧಕ;ಉದರಸಂಬಂಧೀ ಜ್ವರ, ಉರಿಮೂತ್ರ, ಮೂಲವ್ಯಾಧಿಯಲ್ಲಿಯೂ ಉಪಯೋಗಿ. ಕೊತ್ತಂಬರಿಬೀಜದ ಪೇಸ್ಟ್ ಅಥವಾ ಕಲ್ಕ/ ಸೊಪ್ಪಿನಕಲ್ಕ ಹಣೆಗೆ ಲೇಪಿಸಿದರೆ ತಲೆನೋವು ಶಮನವಾಗುವುದು. ಮುಟ್ಟಿನ ಅತಿರಕ್ತಸ್ರಾವ ನಿಯಂತ್ರಕ.  ಮೂಲವ್ಯಾಧಿಯಲ್ಲಿ ಆಗುವ ರಕ್ತಸ್ರಾವ, ಬ್ಯಾಕ್ಟೀರಿಯಾ ಮತ್ತು ಜೀವಾಣುನಾಶಕ ವಾಗಿಯೂ ಬಳಕೆಯಲ್ಲಿದೆ.
ಕೊತ್ತಂಬರಿ ಬೀಜದ ಎಣ್ಣೆ:- ಲಾರ್ವಿಸೈಡ್;ಕೀಟನಾಶಕ, ಕೀಟಗಳ ಲಾರ್ವವು ಜೀವನ ಹಂತದ ವಿರುದ್ಧ ನಿರ್ದಿಷ್ಟವಾಗಿ ಗುರಿಯಾಗಿಸುವುದು. ಸೊಳ್ಳೆಗಳ ವಿರುದ್ಧ ಬಳಕೆಯಲ್ಲಿದೆ. ಗ್ಯಾಸ್ಟ್ರೋಎಂಟ್ರೈಟಿಸ್;ಹೊಟ್ಟೆ ಮತ್ತು ಕರುಳಿನ ಉರಿಯೂತದ್ಲಲೂ ಉಪಯೋಗಿ. ಸಾಮಾನ್ಯವಾಗಿ ಬ್ಯಾಕ್ಟೀರಿಯಾದ ವಿಷಜೀವಾಣು ವಿರುದ್ಧ ನಂಜುನಿವಾರಕ ವೈರಲ್ ಸೋಂಕಿನಿಂದ ಉಂಟಾಗಿ ವಾಂತಿ ಮತ್ತು ಅತಿಸಾರ ಉಂಟಾಗುವುದು.

07 07 ಜೀರಿಗೆ
07. ಜೀರಿಗೆ, ಸಂಸ್ಕೃತ: ಜೀರಕ: ಸಸ್ಯಶಾಸ್ತ್ರೀಯಮೂಲ:  Cuminum cyminum Linn.
ಹೊಟ್ಟೆಯಲ್ಲಿನ ಉದರವಾಯು;ಗ್ಯಾಸ್ ಆಗುವುದನ್ನು ತಡೆದು, ನಿರ್ಮೂಲನೆಯ ಮಾಡುವುದು. ಆಂಟಿಸ್ಪಾಸ್ಮೋಡಿಕ್;ಹೊಟ್ಟೆನೋವಿರುವಾಗ ಕಿಬ್ಬೊಟ್ಟೆಯಸ್ನಾಯು ಅಥವಾ ನೋವಿನ ಸೆಳೆತನಿವಾರಿಸಿ. ಹೊಟ್ಟೆಯುಬ್ಬರ, ಅಸಿಡಿಟಿ, ಅಜೀರ್ಣ, ಎದೆಯುರಿಯಲ್ಲಿ ಜೀರಿಗೆ ಅಸಿಡಿಟಿ, ಜೀರಿಗೆ, ಬೆಲ್ಲ ಹಾಲಿನ ಜೊತೆ/ ಲೇಹ್ಯದ ರೂಪದಲ್ಲಿ ಸೇವಿಸಿದರೆ ಬಾಣಂತಿಯರಲ್ಲಿ ತಾಯಿಯ ಹಾಲಿನ ಹರಿವು ಹೆಚ್ಚಿಸುವುದು. ಜೀರಿಗೆಪುಡಿಯೊಂದಿಗೆ ತುಪ್ಪಸೇವಿಸಿದರೆ ಒಣಕೆಮ್ಮು (ವಾತಜಕಾಸ) ಪರಿಹರಿಸುವುದು. ಜೀರಿಗೆಯನ್ನು ಬೆಲ್ಲದೊಂದಿಗೆ ಸೇವಿಸಿದಾಗ ಜ್ವರಹರ ವಾಗುವುದು. ಜೀರಿಗೆ ಮತ್ತು ನಿಂಬೆಹಣ್ಣಿನ ರಸ ಮಿಶ್ರಣವು ಗರ್ಭಿಣಿ ಸ್ತ್ರೀಯರ ವಾಂತಿಯ ನಿವಾರಿಸುವುದು. ಬಾಣಂತಿ ಸ್ತ್ರೀಯರಲ್ಲಿ ಜೀರಿಗೆ ದುಗ್ಧಕಾರಕ: ಎದೆಹಾಲು ವೃದ್ಧಿಸುವುದು. ಮೂಲವ್ಯಾಧಿಯಲ್ಲೂ  ಜೀರಿಗೆ ಗುಣಕಾರಿಯಾಗುವುದು. ಡಯೇರಿಯಾ;ಅತಿಸಾರ, ಭೇದಿ ಕರುಳಿನಿಂದ ಮಲ ಆಗಾಗ್ಗೆ ದ್ರವರೂಪದಲ್ಲಿ ಹೊರಹಾಕುವ ಸ್ಥಿತಿ. ಮೂತ್ರವರ್ಧಕ. ಆಂಟಿಬ್ಯಾಕ್ಟೀರಿಯಾ;ಬ್ಯಾಕ್ಟೀರಿಯಾದ ಬೆಳವಣಿಗೆಯ ತಡೆಯುವುದು, ರೋಗಕಾರಕ ಜೀವಾಣುನಾಶಕ. ನಂಜುನಿವಾರಕ. ಇದರಿಂದಾಗಿ ಕಾಯಿಲೆ ಹರಡುವಿಕೆಯು ತಡೆಯುವುದು.

08 08 ಜೇನುತುಪ್ಪ
08. ಜೇನುತುಪ್ಪ, ಸಂಸ್ಕೃತ: ಮಧು: ಮೂಲ: Apis mellifera, Apis dorsata, Apis florea, Apis indica
ಜೇನುತುಪ್ಪವು ಸೌಮ್ಯ ವಿರೇಚಕ, ಬ್ಯಾಕ್ಟೀರಿಯ ಜೀವಾಣುನಾಶಕ ನಂಜುನಿವಾರಕ ಆಂಟಿಬಯೋಟಿಕ್;ಬ್ಯಾಕ್ಟೀರಿಯ ಬೆಳವಣಿಗೆಯ ತಡೆದು ರೋಗಕಾರಕ ಸೂಕ್ಷ್ಮಜೀವಾಣುಗಳನ್ನು ನಾಶಪಡಿಸುವುದು. ಜೇನುತುಪ್ಪ ನಿದ್ರಾಜನಕ ನಿದ್ದೆಬರಿಸುವ ದ್ರವ, ನಂಜು ನಿರೋಧಕ, ಕ್ಷಾರದ ಗುಣಲಕ್ಷಣಗಳ ಹೊಂದಿದೆ.  ಜೇನುತುಪ್ಪವು ಕ್ಷಾರ ಹೊಂದಿರುವ 7 ಕ್ಕಿಂತ ಹೆಚ್ಚಿನ ಪಿಹೆಚ್ ಹೊಂದಿರುವ ದ್ರವ. ಜೇನುತುಪ್ಪವು ಸೇವಿಸಿದರೆ ಶೀತ, ನೆಗಡಿ, ಜ್ವರಹರ ವಾಗುವುದು. ನೋಯುತ್ತಿರುವ ಕಣ್ಣಿನತೊಂದರೆ, ಮತ್ತು ಗಂಟಲು, ನಾಲಿಗೆ ಮತ್ತು ಡುಯೊಡಿನಲ್;ಗ್ರಹಣಿಯ ಹುಣ್ಣು, ಬಾಯಿ ಮತ್ತು ಹೊಟ್ಟೆಯಹುಣ್ಣು ನಿವಾರಿಸುವುದು. ಅಸ್ವಸ್ಥ ಲಿವರ್, ಯಕೃತ್; ಪಿತ್ತಜನಕಾಂಗ, ಜೇನುತುಪ್ಪವನ್ನು ಮಲಬದ್ಧತೆಯಲ್ಲಿ ವಿರೇಚಕವಾಗಿಯೂ ಬಳಸಬಹುದು. ಅತಿಸಾರ, ಮೂತ್ರಜನಕಾಂಗ ಮತ್ತು ಮೂತ್ರಕೋಶದ ಕಾಯಿಲೆಯಲ್ಲು ಉಪಯೋಗಿ. ಮೂತ್ರಜನಕಾಂಗ ಮೂತ್ರವಿಕಾರ, ಅಸ್ತಮಾ, ಶ್ವಾಸಕೋಶದ ಕ್ಷಯ, ದೇಹಕ್ಷಯ;ತೀವ್ರ ಅಪೌಷ್ಟಿಕತೆಯಿಂದಾಗಿ ಶಿಶುವಿನ ಅಥವಾ ಮಗುವಿನ ತೂಕವು ಆ ವಯಸ್ಸಿಗೆ ಗಮನಾರ್ಹವಾಗಿ ಕಡಿಮೆಯಾಗುವುದು (ಸಾಮಾನ್ಯಕ್ಕಿಂತ 60 ಪ್ರತಿಶತಕ್ಕಿಂತ ಕಡಿಮೆ) ರಿಕೆಟ್ಸ್;ವಿಟಮಿನ್ ‘ಡಿ’ ಕೊರತೆಯಿಂದ ಮಕ್ಕಳಲ್ಲಿರೋಗ, ಅಪೂರ್ಣ ಕ್ಯಾಲ್ಸಿಫಿಕೇಶನ್, ಮೃದುಗೊಳಿಸಿದ ಮೂಳೆಯು ವಿರೂಪವಾಗಿ ಬಿಲ್ಲಿನಂತೆ ಬಾಗುವುದು. ಸ್ಕರ್ವಿ;ವಿಟಮಿನ್ ‘ಸಿ’ ಕೊರತೆಯಿಂದ ಉಂಟಾದ ಒಂದು ಕಾಯಿಲೆಯಲ್ಲಿ ಒಸಡುಗಳ ರಕ್ತಸ್ರಾವ ಮತ್ತು ಹಿಂದೆ ಗುಣಮುಖವಾದ ಗಾಯಗಳ ತೆರೆಯುವಿಕೆಯಿಂದ ನಿರೂಪಿಸಲ್ಪಟ್ಟಿದೆ. ಅನಿದ್ರೆ, ನಿದ್ರೆಯಕೊರತೆ;ನಿದ್ರಾಹೀನತೆಯಲ್ಲಿಯೂ ಉಪಯೋಗಿ, ಬ್ಯಾಕ್ಟೀರಿಯ ಅಥವಾ  ಜೀವಾಣುನಾಶಕ ವಾಗಿಯೂ ಉಪಯೋಗಿ, ಆಯಾಸವನ್ನೂ ಪರಿಹರಿಸುವುದು. ಜೇನುತುಪ್ಪವು ಬಿಸಿನೀರು ಅಥವಾ ಬಿಸಿ ಆಹಾರ ದೊಂದಿಗೆ ಬಳಕೆ ನಿಷಿದ್ಧ, ಏಕೆಂದರೆ ಅದು ವಿಷದಂತೆ ವರ್ತಿಸುವುದು. ಅದೇರೀತಿ ಬೇಸಿಗೆಯ ಕಾಲದಲ್ಲಿ, ಉಷ್ಣ ಪ್ರಕೃತಿಯವರು, ಮಧ್ಯ ವಯಸ್ಸಿನವರು, ಸಹ ಜೇನುತುಪ್ಪವನ್ನು ಎಚ್ಚರಿಕೆಯಿಂದ ಬಳಸಬೇಕು. ಜೇನುತುಪ್ಪವನ್ನು ಗಾಯ, ಸುಟ್ಟಗಾಯ ಮತ್ತು ಸರ್ಜರಿನಂತರದಲ್ಲಿ ಬಾಧಿತ ಚರ್ಮದ ಪ್ರದೇಶಕ್ಕೆ ನೇರವಾಗಿ ಹಚ್ಚಬಹುದು. ಮೊಡವೆ ಸಮಸ್ಯೆಯಲ್ಲಿಯೂ ಜೇನುತುಪ್ವವನ್ನು ಹತ್ತುನಿಮಿಷ ಮುಖಕ್ಕೆಲೇಪಿಸಿ, ನಂತರ ಮುಖತೊಳೆದರೆ ಮೊಡವೆಗಳ ನಿವಾರಣೆಯಾಗುವುದು. ದೇಹದತೂಕ ಹೆಚ್ಚಿಸಲೂ  ಜೇನುತುಪ್ಪ ಸಹಕಾರಿ. ಹಲಸಿನ ಹಣ್ಣಿನೊಂದಿಗೆ ಅಥವಾ ಬಾಳೆಹಣ್ಣಿನ ಜೊತೆ ಸೇವಿಸಬೇಕು. ರೋಗನಿರೋಧಕ ಶಕ್ತಿಯ ಹೆಚ್ಚಿಸುವುದು. ಜೇನುತುಪ್ಪ, ಹಸುವಿನತುಪ್ಪ (ಸಮಪ್ರಮಾಣ ಬೇಡ) ಸೇವಿಸಿದರೆ ಒಣಕೆಮ್ಮು/ಡ್ರೈಕಾಫ್ ನಿವಾರಕ. ಮನಸ್ಸಿನ ಶಾಂತತೆಯ ಉತ್ತೇಜಿಸಿ ನಿದ್ರೆಯ ಪ್ರೇರೇಪಿಸುವುದು. ಮೂಳೆ ಮತ್ತು ಎಲುಬಿನ ಬೆಳವಣಿಗೆಗೂ ಒಳ್ಳೆಯದು. ನವಜಾತ ಶಿಶುಗಳಲ್ಲಿ  ಜೇನುತುಪ್ಪ ನಿಷಿದ್ಧ ಏಕೆಂದರೆ ಜೇನುತುಪ್ಪದಲ್ಲಿ ಕ್ಲಾಸ್ಟ್ರಿಡಿಯಮ್ ಎಂಬ ಬ್ಯಾಕ್ಟೀರಿಯಾ ಸೇರಿಕೊಂಡು ಶಿಶುವಿನ ಸಣ್ಣ ಕರುಳಿನಲ್ಲಿ ನಂಜುಕಾರಕವಾಗಿ ಜೀವಹಾನಿಯೂ ಆಗಬಹುದು.

09 09 ತೆಂಗು
09. ತೆಂಗು, ಸಂಸ್ಕೃತ: ನಾರಿಕೇಲ, ನಾಲಿಕೆರ, ಲಾಂಗಲಿ, ತುಂಗ, ಸ್ಕಂಧಫಲ, ಸದಾಫಲ, ತೃಣರಾಜ,ಕುರ್ಚ್ಶ್ರೀಷಕ: ಸಸ್ಯಶಾಸ್ತ್ರೀಯಮೂಲ:  Cocos nucifera Linn.
ಎಳನೀರು-ಶೀತಲೀಯ;ಸಾಂಪ್ರದಾಯಿಕವಾಗಿ ದೇಹ ತಂಪಾಗಿಸಲು ಉಲ್ಲಾಸಗೊಳಿಸಲು ಶಾಂತಗೊಳಿಸಲು ಜೀವದ್ರವ, ದಾಹ, ಬಾಯಾರಿಕೆಯಲ್ಲಿ ಶ್ರೇಷ್ಠ. ಜ್ವರದಲ್ಲಿ ತಾಪಶಾಮಕ, ಮೂತ್ರಜನಕಾಂಗ, ಮೂತ್ರವಿಕಾರ, ಉರಿಮೂತ್ರ, ವಿಟಮಿನ್ ಆಗಿಯೂ ಬಳಸಬಹುದು. ಗ್ಯಾಸ್ಟ್ರೋಎಂಟ್ರೈಟಿಸ್;ಹೊಟ್ಟೆಕರುಳಿನ ಉರಿಯೂತವು ಬ್ಯಾಕ್ಟೀರಿಯದಿಂದ ಜೀವಾಣುವಿಷ ವೈರಲ್ ಸೋಂಕಿನಿಂದ ಉಂಟಾಗಿ ವಾಂತಿ ಅತಿಸಾರಕ್ಕೆ ಕಾರಣವಾಗುವುದು. ಎಳನೀರು ಲವಣ ಮತ್ತು ಪೊಟ್ಯಾಶಿಯಂ ಹೊಂದಿದ್ದು ಕಾಲರಾ ರೋಗಿಗಳಲ್ಲಿ ಪೊಟ್ಯಾಶಿಯಂ ಪೂರಕವಾಗಿ ಬಳಕೆಯಲ್ಲಿದೆ, ರಕ್ತಸ್ರಾವತಡೆಯುವ/ ಸ್ಟಿಪ್ಟಿಕ್, ನಂಜುನಿವಾರಕವಾಗಿ ಬಳಕೆ, ಜಠರಕರುಳಿನ ಹುಣ್ಣು ಮತ್ತು ದೌರ್ಬಲ್ಯ ನಿವಾರಣೆಯಲ್ಲಿ ಸಹಾಯಕ. ಕೊಬ್ಬರಿಯು ಹಸಿವನ್ನು ಉತ್ತೇಜಿಸಿ ಜೀರ್ಣಕ್ರಿಯೆಗೆ ಸಹಾಯಮಾಡುವುದು. ಬಲವರ್ಧಕ ತೂಕವು ಹೆಚ್ಚಿಸಿ ಮಲಬದ್ಧತೆಯಲ್ಲಿ ರೇಚಕಯೂ ಬಳಕೆಯಲ್ಲಿದೆ. ಸ್ತ್ರೀಯರ ರಕ್ತಸ್ರಾವ ನಿಲ್ಲಿಸುವ ಸಾಮರ್ಥ್ಯ ಹೊಂದಿದೆ. ನಿದ್ರಾಜನಕವೂ ಹೌದು. ಡಿಸ್ಪೆಪ್ಸಿಯಾ; ಜೀರ್ಣಕಾರಿ ಕ್ರಿಯೆಯ ಅಸ್ವಸ್ಥತೆ, ಅಜೀರ್ಣ, ಅಗ್ನಿಮಾಂದ್ಯ, ಮಂದಾಗ್ನಿ, ಸುಡುವ ಸಂವೇದನೆ, ಎಳನೀರು ನಿರ್ಜಲೀಕರಣದಲ್ಲಿ ಲವಣಯುಕ್ತ ಅಂತಃ​​ಸ್ರವೀಯ ದ್ರವವಾಗಿ (ಐ.ವಿ. ಫ್ಲೂಯಿಡ್ ಆಗಿಯೂ) ತೆಂಗಿನಹೂವು ಸೇವಿಸಿದರೆ ಮೂತ್ರದ ತೊಂದರೆ, ಮೂತ್ರದಲ್ಲಿ ಕಲ್ಲು ಇತ್ಯಾದಿ ತೊಂದರೆಯ ನಿವಾರಿಸುವುದು.
ತೆಂಗಿನಎಣ್ಣೆ:- ಆಂಟಿಸೆಪ್ಟಿಕ್; ಬಾಹ್ಯವಾಗಿ ನಂಜುನಿರೋಧಕ, ರೋಗಾಣು ರೋಧಕ, ರೋಗಾಣುಗಳ ನಾಶಮಾಡುವ ಗುಣಹೊಂದಿದೆ. ತೆಂಗಿನ ಹೂವಿನೊಂದಿಗೆ ಊತ, ಬಾವುಗಳಲ್ಲಿಯೂ ಉಪಯೋಗಿ. ಎಲೆ-ಬಾವು, ಕುರು, ಹುಣ್ಣುಗಳಲ್ಲಿಯೂ ಎಲೆಯ ಮಸಿಯನ್ನು ಆಳವಾಗಿ ಕೊಯ್ದಿರುವ ಜಾಗದಲ್ಲಿ ಲೇಪಿಸಬಹುದು. ಗೊನೋರಿಯಾದಲ್ಲಿಯೂ ಉಪಯೋಗಿ. ತೆಂಗಿನ ಎಣ್ಣೆಯನ್ನು ಅಂಗಾಲುಗಳಿಗೆ ರಾತ್ರಿ ಮಲಗುವ ಮುನ್ನಹಚ್ಚಿದರೆ ನಿದ್ರಾಜನಕವಾಗಿ ಉಪಯೋಗಿ.

10 10 ತುಪ್ಪ
10. ತುಪ್ಪ, ಸಂಸ್ಕೃತ: ಘೃತ: ಮೂಲ: Ghee
ಪ್ರತಿದಿನ ಆಹಾರವನ್ನು ತುಪ್ಪದೊಂದಿಗೆ ಸೇವಿಸಿದರೆ ಅತ್ಯಂತ ಲಾಭಕಾರಿ, ಜೀರ್ಣಶಕ್ತಿಹೆಚ್ಚುವುದು. ನೆನಪಿನಶಕ್ತಿ ವೃದ್ಧಿಸುವುದು. ಮೂಳೆಗಳ ಬೆಳವಣಿಗೆಗೆ ಉಪಯೋಗಿ, ಮೂಳೆಯ ಸವಕಳಿತಡೆದು ಆಮವಾತ, ಸಂಧಿವಾತ, ಸಂದುನೋವು ವ್ಯಾಧಿಗಳಲ್ಲಿ ಬಳಕೆ. ದೌರ್ಬಲ್ಯ, ನಿಶ್ಯಕ್ತಿಯಲ್ಲಿ ಬೆಳಿಗ್ಗೆ ಖಾಲಿಹೊಟ್ಟೆಗೆ ಒಂದು ಚಮಚ ತುಪ್ಪತಿಂದು ಬಿಸಿಹಾಲಿನ ಸೇವನೆ ಮಾಡಿದರೆ ಶಕ್ತಿ ಒದಗಿಸಿ ದೇಹತೂಕ ಹೆಚ್ಚಿಸುವುದು. ತೂಕಇಳಿಸಲು ತುಪ್ಪವನ್ನು ಬಿಸಿನೀರಿನೊಂದಿಗೆ ಬಳಸಬೇಕು. ಜ್ವರ ಶಮನವಾದ ನಂತರ ರೋಗಿಯ ಬಲವರ್ಧನೆಗೆ ಸಹಕಾರಿ. ರಾತ್ರಿಮಲಗುವ ಮುನ್ನ ತುಪ್ಪವನ್ನು ಅಂಗಾಲಿಗೆ ಹಚ್ಚಿದರೆ ಚೆನ್ನಾಗಿ ನಿದ್ದೆಬರುವುದು.  ತುಪ್ಪ ದೃಷ್ಠಿ ವರ್ಧಕವೂ ಹೌದು. ಗಂಟಲಿನ ಉತ್ತಮ ಸ್ವರಕ್ಕಾಗಿ ಪ್ರತಿನಿತ್ಯ ತುಪ್ಪಸೇವನೆ ಒಳ್ಳೆಯದು. ತುಪ್ಪವು ಕಾಲಿಗೆ ಹಚ್ಚಿತಿಕ್ಕುವುದರಿಂದ ಸಂಧಿವಾತ, ಕಾಲುನೋವು, ಸೆಳೆತ ಪರಿಹಾರವಾಗುವುದು ಆಬಾಲವೃದ್ಧರಿಗೆ ತುಪ್ಪಆರೋಗ್ಯದಾಯಕ.

11 11 ತುಳಸಿ
11. ತುಳಸಿ, ಸಂಸೃತ: ತುಳಸೀ: ಸಸ್ಯಶಾಸ್ತ್ರೀಯಮೂಲ:  Ocimum sanctum Linn.
ತುಳಸಿಎಲೆ- ಕಾರ್ಮಿನೇಟಿವ್; ಉದರವಾಯು ನಿರ್ಮೂಲನೆ, ಹೊಟ್ಟೆಯಲ್ಲಿ ವಾಯುಉತ್ಪನ್ನ ತಡೆಯುವುದು, ಸ್ಟೊಮ್ಯಾಕಿಕ್;ಉದರಕ್ಕೆ ಬಲನೀಡಿ ಕಾರ್ಯಕ್ಷಮತೆ ಹಸಿವು ಹೆಚ್ಚಿಸಿ ಆಹಾರ ಜೀರ್ಣಕ್ರಿಯೆಯಲ್ಲೂ ಸಹಕಾರಿ. ಸ್ತ್ರೀಯರ ಹೊಟ್ಟೆನೋವು ಪರಿಹರಿಸುವುದು. ಉತ್ತಮಜ್ವರಹರ. ತುಳಸಿಎಲೆಯ ಕಷಾಯ ಅಥವಾ ಎಲೆಯ ರಸದೊಂದಿಗೆ ಚಿಟಿಕೆ ಶುಂಠಿ, ಮೆಣಸು, ಹಿಪ್ಪಲಿ ಸೇರಿಸಿ ಸೇವಿಸಿದರೆ ಎಲ್ಲಾಬಗೆಯ ಜ್ವರದಲ್ಲಿ ನಿವಾರಿಸುವುದು. ತುಳಸಿಎಲೆಯ ಸೇವನೆಯಿಂದ ಶೀತ, ನೆಗಡಿ ಗುಣವಾಗುವುದು. ವಾಂತಿ, ಬಿಕ್ಕಳಿಕೆಯಲ್ಲಿ ತುಳಸೀಕಷಾಯಕ್ಕೆ ಜೇನುತುಪ್ಪ ಸೇರಿಸಿ ಸೇವಿಸಬೇಕು. ಚರ್ಮರೋಗ/ ತುರಿಕಜ್ಜಿಯಲ್ಲಿ ತುಳಸಿರಸಕ್ಕೆ ಉಪ್ಪುಸೇರಿಸಿ ಹಚ್ಚಬಹುದು. ಜೇನು ಇತ್ಯಾದಿ ಕೀಟ ಕಡಿದಾಗ ತುಳಸಿಎಲೆಯ ರಸವು ಉಪಯೋಗಿ.

12 12 ದ್ರಾಕ್ಷಿ
12. ದ್ರಾಕ್ಷಿ: ದ್ರಾಕ್ಷಾ, ಮೃದ್ವಿಕಾ, ಡೀಹೈಡ್ರೇಟೆಡ್ ಫ್ರೂಟ್ಸ್, ಕಿಷ್ಮಿಶ್. ಸಸ್ಯಶಾಸ್ತ್ರೀಯಮೂಲ:  Vitis vinifera Linn.
ಒಣಗಿದ ಬೀಜರಹಿತದ್ರಾಕ್ಷಿ:- ಪೋಷಕ ರುಚಿಕರ ಮತ್ತು ಆರೋಗ್ಯ ಉತ್ತೇಜಕವಾಗಿದೆ. ಕೆಮ್ಮು ಕಡಿಮೆಮಾಡಲು ಉಪಯೋಗಿ, ರೆಸ್ಪಿರೇಟರಿಕ್ಯಾತರ್ಹ;ಮೂಗಿನಲೋಳೆ ಸ್ರವಿಕೆಯ ನಿಯಂತ್ರಿಸುವುದು. ಐದು-ಹತ್ತು ಒಣದ್ರಾಕ್ಷಿಯು ಅನೀಮಿಯದಲ್ಲಿ ಬಳಸಿದರೆ ರಕ್ರವರ್ಧಕ, ಜಾಂಡೀಸ್ನಲ್ಲೂ ಉಪಯೋಗಿ, ಡಿಸ್ಪೆಪ್ಸಿಯಾ;ಜೀರ್ಣಕಾರಿ ಕ್ರಿಯೆಯ ಅಸ್ವಸ್ಥತೆ, ಡಿಸ್ಪೆಪ್ಸಿಯಾ;ಜೀರ್ಣಕಾರಿ ಕ್ರಿಯೆಯ ಅಸ್ವಸ್ಥತೆ, ಮಲಬದ್ಧತೆ, ಹಿಮೊರೇಜ್;ದ್ರಾಕ್ಷಿಯು ರಕ್ತಸ್ರಾವತಡೆಯುವಲ್ಲಿ ಉಪಯೋಗಿ, ಗೌಟ್;ಯೂರಿಕ್ಆಮ್ಲದ ದೋಷಯುಕ್ತ ಚಯಾಪಚಯವು ಸಂಧಿವಾತಕ್ಕೆ ಕಾರಣವಾಗುವುದುವುದು. ವಿಶೇಷವಾಗಿ ಪಾದಗಳ ಸಣ್ಣ ಮೂಳೆ, ಚಾಕ್ಸ್ಟೋನ್ಗಳ ಶೇಖರಣೆ ಮತ್ತು ತೀವ್ರವಾದ ನೋವು ಇದರಲಕ್ಷಣ. ಮುಟ್ಟಿನದೋಷ ಸ್ತ್ರೀಯರ ಹೊಟ್ಟೆನೋವು ಪರಿಹರಿಸುವುದು. ಅಲ್ಲದೇ ಪಿತ್ತದತೊಂದರೆ, ಹಸಿವಿಲ್ಲದಿರುವುದು, ಅಶಕ್ತಿ, ಮಲಪ್ರವೃತ್ತಿ, ಮಲಬದ್ಧತೆ ನಿವಾರಿಸುವುದು. ವಾಂತಿ, ತಲೆಸುತ್ತು, ಹೀಗೆ ಅನೇಕ ವ್ಯಾಧಿಯಲ್ಲಿ ದ್ರಾಕ್ಷಿ ಉಪಯೋಗಿ. ಕಾಮಾಲೆ, ರಕ್ತಹೀನತೆ, ಜೀರ್ಣವಿಕಾರ, ಪಿತ್ತವಿಕಾರ, ಜ್ವರ, ಕೆಮ್ಮು, ಕ್ಷಯ, ಅಮ್ಲಪಿತ್ತ ರೋಗಗಳಲ್ಲಿ ದ್ರಾಕ್ಷಿಯಿಂದ ತಯಾರಿಸಿದ ಲೇಹ್ಯ,

13 13 ನಿಂಬೆಹಣ್ಣು
13. ನಿಂಬೆಹಣ್ಣು, ಸಂಸ್ಕೃತ: ಜಂಬೀರ, ಜಾಂಫಲ, ನಿಂಬು, ಲಿಂಪಕ, ದಂತಶಥ, ಐರಾವತ, ನಿಂಬುಕ: ಸಸ್ಯಶಾಸ್ತ್ರೀಯಮೂಲ: Citrus limon (Linn.) Burm.f.
ನಿಂಬೆಹಣ್ಣು:-ಸ್ಕರ್ವಿಯು ವಿಟಮಿನ್ ‘ಸಿ’ ಕೊರತೆಯ ಹೆಸರು, ಇದರ ಲಕ್ಷಣ ರಕ್ತಹೀನತೆ, ಕ್ಷೀಣತೆ, ಬಳಲಿಕೆ, ಸ್ವಾಭಾವಿಕ ರಕ್ತಸ್ರಾವ, ಕೈಕಾಲುಗಳಲ್ಲಿ ನೋವು, ಮತ್ತು ವಿಶೇಷವಾಗಿ ಕಾಲು, ಮತ್ತು ದೇಹದ ಕೆಲವು ಭಾಗಗಳಲ್ಲಿ ಸ್ವೆಲಿಂಗ್;ಬಾವು ಮತ್ತು ಕೆಲವೊಮ್ಮೆ ಹಲ್ಲುಗಳ ನಷ್ಟಕ್ಕೆ ಕಾರಣವಾಗಬಹುದು. ಕಾರ್ಮಿನೇಟೀವ್ :ಉದರ ವಾಯುವಿರೋಧಿ, ವಾಯು ಉತ್ಪಾದನೆ  ತಡೆದು, ವಾಯು ನಿರ್ಮೂಲನೆ ಮಾಡುವುದು. ಸ್ಟೊಮ್ಯಾಕಿಕ್; ಉದರಕ್ಕೆ ಬಲನೀಡಿ ಕಾರ್ಯಕ್ಷಮತೆ, ಹಸಿವು ಹೆಚ್ಚಿಸಿ ಆಹಾರ ಜೀರ್ಣಕ್ರಿಯೆಯಲ್ಲೂ ಸಹಕಾರಿ. ಆಂಟಿಹಿಸ್ಟಮಿನ್;ಜ್ವರ ಮತ್ತು ಇತರೆ ಅಲರ್ಜಿಗಳಿಗೆ ಚಿಕಿತ್ಸೆನೀಡುವ ಪದಾರ್ಥವಾಗಿದೆ, ಬ್ಯಾಕ್ಟೀರಿಯ ಮತ್ತು ಜೀವಾಣು ನಾಶಕವಾಗಿಯೂ ಉಪಯೋಗಿ. ಶೀತ ನೆಗಡಿ, ಇನ್ಫ್ಲೂಯೆನ್ಙ, ಜ್ವರ, ಬಿಕ್ಕುನಿವಾರಕ, ಪಿತ್ತಜನಕಾಂಗ ಅಥವಾ ಪಿತ್ತಕೋಶದ ಅಸ್ವಸ್ಥತೆಯಿಂದ ಉಂಟಾದ ಗ್ಯಾಸ್ಟ್ರಿಕ್ ತೊಂದರೆ ನಿವಾರಿಸುವುದು.
ನಿಂಬೆಹಣ್ಣಿನರಸ:- ಉಪ್ಪಿನೊಂದಿಗೆಬೆರೆಸಿ ಬಾಹ್ಯವಾಗಿ, ರಿಂಗ್ವರ್ಮ್;ಶಿಲೀಂಧ್ರಗಳಿಂದ ಉಂಟಾದ ಕಜ್ಜಿ, ಗಜಕರ್ಣ ಚರ್ಮ ಅಥವಾ ಚರ್ಮ ಅಥವಾ ಉಗುರುಗಳ ಸೋಂಕು,  ನಂಜುನಿವಾರಕ. ಲೆಪ್ರಸಿ;ಕುಷ್ಠರೋಗ, ಉಷ್ಣವಲಯದ ಮತ್ತು ಉಪೋಷ್ಣ ವಲಯದ ಪ್ರದೇಶಗಳಲ್ಲಿ ಸಂಭವಿಸುವ ಧೀರ್ಘಕಾಲದ ಗ್ರ್ಯಾನುಲೋಮಾಟಸ್ ಸಂವಹನ ರೋಗ. ಚರ್ಮದಲ್ಲಾಗುವ ಬಿಳಿಕಲೆ ನಿವಾರಿಸುವುದು.
ನಿಂಬೆಹಣ್ಣಿನ ಗಿಡದಎಲೆ ಮತ್ತು ಕಾಂಡ:-ಬ್ಯಾಕ್ಟೀರಿಯನಾಶಕ,  ನಂಜುನಿವಾರಕ. ನಿಂಬೆಹಣ್ಣಿನರಸ ಎದೆಯುರಿ/ ಹೊಟ್ಟೆ ತೊಳೆಸುವ ಸಮಸ್ಯೆ ನಿವಾರಿಸುವುದು. ನಿಂಬೆಹಣ್ಣಿನ ಸಿಪ್ಪೆಒಣಗಿದಪುಡಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆಯಹುಳು ಸಾಯುತ್ತವೆ. ರಕ್ತಸ್ರಾವ ತೊಂದರೆಯಲ್ಲಿ ನಿಂಬೆಹಣ್ಣಿನ ರಸದ ಪ್ರಯೋಗವು ಅತ್ಯಂತ ಪರಿಣಾಮಕಾರಿ. ಚರ್ಮರೋಗದಲ್ಲಿ ನಿಂಬೆರಸ ಹಚ್ಚಿಸ್ನಾನ ಮಾಡಬಹುದು. ಉಪವಾಸದೊಂದಿಗೆ ನಿಂಬೆರಸ ಜೇನುತುಪ್ಪ ನೀರುಕುಡಿದರೆ ಜೀರ್ಣದತೊಂದರೆ, ಅತಿಯಾದತೂಕ, ಆಮವಾತ, ಸಂಧಿವಾತ ಕೊಬ್ಬಿನಂಶ ನಿವಾರಿಸುವುದು ನೀರಿಗೆ ನಿಂಬೆರಸ ಸೇರಿಸಿ ಬಳಸಿದರೆ ವಾಂತಿ, ಜ್ವರ, ಮಲಬದ್ಧತೆ ನಿವಾರಿಸುವುದು. ರೋಗನಿರೋಧಕ ಶಕ್ತಿ ವೃದ್ಧಿಸುವುದು. ಜ್ವರದಲ್ಲಿ ಉತ್ತಮಪಾನೀಯ. ಊಟದ ನಂತರ ಅರ್ಧಭಾಗ ನಿಂಬೆಹಣ್ಣು ಚೀಪುವುದರಿಂದ ಮೂಲವ್ಯಾಧಿ ನಿವಾರಿಸುವುದು. ಧ್ವನಿಒಡೆದಾಗ ಬಿಸಿನೀರಿಗೆ ನಿಂಬೆರಸ, ಉಪ್ಪುಸೇರಿಸಿ ಆಗಾಗ ಬಳಸಬೇಕು. ವಾಂತಿಯಲ್ಲಿಯೂ ಉತ್ತಮ. ತುರಿಕಜ್ಜಿಯಲ್ಲಿ ಉಪಯೋಗಿ, ತಲೆಕೂದಲ ಆರೈಕೆಯಲ್ಲಿ ನಿಂಬೆರಸ ಒಳ್ಳೆಯದು. ನಿಂಬೆಹಣ್ಣು ವಿಟಮಿನ್ ಸಿ, ಮತ್ತು ಕ್ಯಾಲ್ಸಿಯಂಗಳ ಖಜಾನೆಯಾಗಿದೆ.

14 14 ಬೆಲ್ಲ
14 ಬೆಲ್ಲ, ಸಂಸ್ಕೃತ: ಗುಡ.  ಸಸ್ಯಶಾಸ್ತ್ರೀಯಮೂಲ: Jaggery, Saccharum officinarum
ಬೆಲ್ಲವು ರಕ್ತವರ್ಧಕ, ಬಲವರ್ಧಕ, ಚರ್ಮರೋಗದಲ್ಲಿ ದಿನಕ್ಕೆರಡುಬಾರಿ ಬೆಲ್ಲ ನೀರು ಕುಡಿದರೆ ರಕ್ತಹೀನತೆ ನಿವಾರಿಸಿ ರಕ್ತಶುದ್ಧಿಯಾಗುವುದು. ಊಟದ ನಂತರ ಬೆಲ್ಲತಿಂದು ನೀರು ಕುಡಿದರೆ ಎದೆಉರಿ, ಹುಳಿತೇಗು, ಪಿತ್ತದ ತೊಂದರೆ ನಿವಾರಿಸುವುದು. ಅಳಲೆಕಾಯಿ ಪುಡಿಯೊಂದಿಗೆ ಬೆಲ್ಲ ಸೇರಿಸಿ ಸೇವಿಸಿದರೆ ಮಲಬದ್ಧತೆ ನಿವಾರಿಸಿ ಮೂಲವ್ಯಾಧಿಯ  ಪರಿಹರಿಸುವುದು. ಅಜೀರ್ಣದ ತೊಂದರೆಯಲ್ಲಿ ಬೆಲ್ಲವನ್ನು ಶುಂಠಿಯೊಂದಿಗೆ, ಸಂಧಿವಾತ, ಅತಿಯಾದ ತೂಕದ ತೊಂದರೆಗಳಲ್ಲಿ ಶುಂಠಿಯ ಚೂರ್ಣ, ಬೆಲ್ಲದೊಂದಿಗೆ ತಿಂದರೆ ಉಪಯೋಗಿ. ಇದು ಬಿಕ್ಕಳಿಕೆ ನಿವಾರಿಸುವುದು. ಚಿಟಿಕೆ ಹಿಂಗು, ಜೀರಿಗೆ ಬಿಳಿಗಾರದಪುಡಿ, ಬೆಲ್ಲದೊಂದಿಗೆ ಸೇವಿಸಿ ಬಿಸಿನೀರು ಕುಡಿದರೆ, ಮುಟ್ಟಿನಸ್ರಾವ ನಿಯಂತ್ರಣಕ್ಕೆ ಬಂದು ಹೊಟ್ಟೆನೋವು ಪರಿಹರಿಸುವುದು.

15 15 ಬೆಳ್ಳುಳ್ಳಿ
15. ಬೆಳ್ಳುಳ್ಳಿ, ಸಂಸ್ಕೃತ: ಲಶುನ, ರಸೋನ, ಯವನೇಷ್ಠ, ಉಗ್ರಗಂಧ, ಮಹೌಷಧ, ಆರಿಷ್ಠ. ಸಸ್ಯಶಾಸ್ತ್ರೀಯಮೂಲ: Allium sativum Linn.
ಬೆಳ್ಳುಳ್ಳಿಯು ದುಂಡಾಕಾರದ ಲಿಲಿ ಕುಟುಂಬಕ್ಕೆ ಸೇರಿದ, ತಿರುಳಿರುವ ಎಲೆ ಮತ್ತು ಗುಂಪಾಗಿ ಆವೃತವಾದ ಸಣ್ಣಕಾಂಡವನ್ನು  ಒಳಗೊಂಡಿದೆ. ಆಹಾರಕ್ಕೆ ಪೂರಕವಾಗಿ ಬೆಳ್ಳುಳ್ಳಿಯ ಬಳಸಲು ರಕ್ತದ ಹೆಚ್ಚಿದ ಲಿಪಿಡ್ಅಂಶ ನಿಯಂತ್ರಿಸುವುದು. ಆಂಟಿ ಏಜಿಂಗ್; ವಯಸ್ಸಿಗೆ ಅನುಗುಣವಾಗಿ ಅವಲಂಬಿಸಿರುವ ರಕ್ತನಾಳಗಳ ಬದಲಾವಣೆಯ ತಡೆಯಬಹುದು. ಆಂಟಿಮೈಕ್ರೋಬಿಯಲ್; ಬ್ಯಾಕ್ಟೀರಿಯ ಬೆಳವಣಿಗೆತಡೆದು, ರೋಗಕಾರಕ ಸೂಕ್ಷ್ಮಜೀವಾಣು ನಾಶಕ,  ನಂಜುನಿವಾರಕ. ರೆಸ್ಪಿರೇಟರಿ ಕ್ಯಾತರ್ಹ;ಮೂಗಿನ ಲೋಳೆಯ ಸ್ರವಿಕೆಯ ನಿಯಂತ್ರಿಸುವುದು. ಬೆಳ್ಳುಳ್ಳಿಯ ಬಲ್ಬ್;ಕಂದವು ಭಾರತದ ಆಯುರ್ವೇದ ಫಾರ್ಮಕೋಪಿಯಾದಲ್ಲಿ ಮೆದುಳಿನ ವ್ಯಾಧಿಗಳಾದ ಎಪಿಲೆಪ್ಸಿ ಮತ್ತು ಸೈಕೋಸಿಸ್ ಅಸ್ವಸ್ಥತೆಯಲ್ಲಿ ಬೆಳ್ಳುಳ್ಳಿಯ ಎಸಳುಗಳ ಬಳಕೆಯನ್ನು ಉಲ್ಲೇಖಿಸಲಾಗಿದೆ. ಶಿಲೀಂಧ್ರಗಳ ಬೆಳವಣಿಗೆಯ ನಾಶಪಡಿಸುವ ಅಥವಾ ತಡೆಯುವ ಶಕ್ತಿಹೊಂದಿದೆ. ಆಂಥೆಲ್ಮಿಂಟಿಕ್;ಕರುಳಿನ ಪರಾವಲಂವಿ ಹುಳುಗಳ  ನಾಶಪಡಿಸುವುದು. ಆಂಟಿಥ್ರಾಂಬೋಟಿಕ್; ರಕ್ತಹೆಪ್ಪುಗಟ್ಟುವುದನ್ನು ತಡೆಯುವುದು. ಹೈಪೋಟೆನ್ಸಿವ್; ರಕ್ತದೊತ್ತಡ ಕಡಿಮೆ ಮಾಡುವುದು. ಮಧುಮೇಹ ನಿಯಂತ್ರಿಸಿ, ಹೈಪೋ-ಕೊಲೆಸ್ಟೆರೊಲೆಮಿಕ್; ರಕ್ತದ ಕೊಲೆಸ್ಟ್ರಾಲ್ ನಿಯಂತ್ರಿಸುವುದು. ಶ್ವಾಸಕೋಶ ರೋಗದಲ್ಲಿ ಬಳಕೆಯಲ್ಲಿದೆ. ವಾತರೋಗ, ಸಂಧಿವಾತ, ಪಕ್ಷಾಘಾತ, ನರಮಂಡಲ, ರಕ್ತನಾಳಗಳಲ್ಲಿ ಸಂಬಂಧಿಸಿದ ರೋಗಗಳಲ್ಲಿ ಬೆಳ್ಳುಳ್ಳಿ, ಹಸಿಯಾಗಿ ಸೇವಿಸಬೇಕು.

16 16 ಮಜ್ಜಿಗೆ
16. ಮಜ್ಜಿಗೆ, ಸಂಸ್ಕೃತ: ತಕ್ರ: ಮೂಲ: Butter milk
ಮಜ್ಜಿಗೆ ಆಹಾರವೂ ಅನೇಕ ರೋಗಗಳಲ್ಲಿ ಪಥ್ಯವೂ ಔಷಧವೂ ಆಗಿದೆ. ಆದ್ದರಿಂದ ಇದನ್ನು ‘ಭೂಲೋಕದ ಅಮೃತ’ ಎಂದು ಕರೆಯಲಾಗಿದೆ. ಅತಿಸಾರ, ಭೇದಿ, ಮೂಲವ್ಯಾಧಿ, ಅಜೀರ್ಣಮತ್ತು ಕಫದ ತೊಂದರೆಯಲ್ಲೂ ಮಜ್ಜಿಗೆ ಉಪಯುಕ್ತ. ಒಂದು ಲೋಟ ಮಜ್ಜಿಗೆಗೆ ಚಿಟಿಕೆಉಪ್ಪು, ಶುಂಠಿಪುಡಿ, ಜೀರಿಗೆಪುಡಿ ಸೇರಿಸಿಕುಡಿದರೆ ಅಜೀರ್ಣ, ಹೊಟ್ಟೆಯುಬ್ಬರ, ಮಲಬದ್ಧತೆ, ಮೂಲವ್ಯಾಧಿ, ಬಾಯಾರಿಕೆಯ ನಿವಾರಿಸುವುದು. ಮಜ್ಜಿಗೆಗೆ ಚಿಟಿಕೆಉಪ್ಪು ಅಥವಾ ಅರಿಶಿಣಪುಡಿ ಸೇರಿಸಿ ಮುಖಕ್ಕೆಮಾಲಿಷ್ ಮಾಡುವುದರಿಂದ ಮೊಡವೆ ನಿವಾರಿಸಿ ಮುಖದ ಕಾಂತಿಹೆಚ್ಚಿಸುವುದು. ಮಜ್ಜಿಗೆಯನ್ನು ತಲೆಕೂದಲಿಗೆ ಲೇಪಿಸಿ ಒಂದುಗಂಟೆ ನಂತರದ ಸ್ನಾನವು ಕೂದಳನ್ನು ಹೊಳಪುಗೊಳಿಸಿ ಹೇನು, ಹೊಟ್ಟುಕೂಡ ಕಡಿಮೆಯಾಗಿ ನಿದ್ದೆಯೂ ಚೆನ್ನಾಗಿಬರುವುದು. ಸಿಹಿಮಜ್ಜಿಗೆಗೆ ಉಪ್ಪುಸಕ್ಕರೆ ಸೇರಿಸಿಬಳಸಿದರೆ ಶಕ್ತಿವರ್ಧಕಪಾನೀಯ. ಬೆಣ್ಣೆತೆಗೆಯದ ಮೊಸರು ದಿನನಿತ್ಯ ಬಳಸುವುದು ಒಳ್ಳೆಯದಲ್ಲ. ಮಜ್ಜಿಗೆಯನ್ನು ಚರ್ಮಕ್ಕೆ ಹಚ್ಚಿ ಘಂಟೆನಂತರ ಸ್ನಾನಮಾಡಿದರೆ ಚರ್ಮದ ಆರೋಗ್ಯ ವರ್ಧಿಸಿ ಚರ್ಮಮೃದು ಆಗುವುದು.

17 17 ಮೆಂತೆ
17. ಕನ್ನಡ: ಮೆಂತೆ, ಸಂಸ್ಕೃತ: ಮೇಥಿ, ವಸ್ತಿಕಾ, ಮೇಥಿನಿ, ದೀಪನಿ, ಬಹುಪತ್ರಿಕಾ, ಗಂಧಫಲ ಮೇಥಿಕಾ: ಸಸ್ಯಶಾಸ್ತ್ರೀಯಮೂಲ:  Trigonella foenum-graecum
ಮೆಂತೆಕಾಳು-ಹಸಿವಿನ ಕೊರತೆಯಲ್ಲಿ ಉಪಯೋಗಿ, ಫ್ಲಾಟುಲೆನ್ಸ್;ಆಹಾರನಳಿಕೆ ಕರುಳಲ್ಲಿಅಧಿಕ ವಾಯುವಿನ ಶೇಖರಣೆ ಮತ್ತು ಎದೆಯುರಿ ವಾಕರಿಕೆಯಿಂದ ನಿರೂಪಿಸಲ್ಪಟ್ಟಿದೆ. ಅತಿಸಾರ, ಕರುಳಿನ ಸೋಂಕು ಮಲದಲ್ಲಿನರಕ್ತ ಮತ್ತು ಲೋಳೆಯ ಉಪಸ್ಥಿತಿ ಯೊಂದಿಗೆ ತೀವ್ರವಾದ ಅತಿಸಾರಕ್ಕೆ ಕಾರಣವಾಗುವುದು. ಯಕೃತ್ ಮತ್ತು ಸ್ಪ್ಲೀನ್ಗಳ ಹಿಗ್ಗುವಿಕೆ ಕಡಿಮೆಮಾಡುವುದು. ಮೆಂತೆಕಾಳಿನ ಪುಡಿಯನ್ನು ನೀರಿನಲ್ಲಿ ನೆನೆಸಿಸೇವಿಸಿದರೆ (ಲ್ಯಾಕ್ಟಗಾಗ್;)ತಾಯಿಯ ಹಾಲಿನಹರಿವು ಉತ್ತೇಜಿಸುವುದು. ಕೀವುತುಂಬಿದ ಕುರುಗಳಲ್ಲಿ ಬೀಜದ ಕಷಾಯ ಸೇವನೆ ಪರಿಣಾಮಕಾರಿ. ಉರಿಯೂತ/ ಸ್ವೆಲಿಂಗ್ ನಿವಾರಕ. ಬೀಜದ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಬಾಯಿಯ ಉರಿಹುಣ್ಣು ಮತ್ತು ಗಂಟಲು ಬೇನೆ ನಿವಾರಿಸುವುದು. ಹೊಟ್ಟೆಯುಬ್ಬರ, ವಾತದತೊಂದರೆ ಕಫನಿವಾರಕ. ಸಂಧಿವಾತ, ವಾತಕಂಟಕ, ಕುತ್ತಿಗೆನೋವು, ಕಾಲುನೋವು ನಿವಾರಿಸುವುದು. ಮೆಂತೆ ಕಷಾಯವು ಹಾಲಿನೊಂದಿಗೆ ಬಳಸಿದರೆ ಪರಿಣಾಮಕಾರಿ. ಸೂಕ್ಷ್ಮಶ್ವಾಸನಾಳದ ಚರ್ಮದ ಉರಿಯೂತ ಮತ್ತು ಕೆಮ್ಮಿನಲ್ಲಿ ಮೆಂತೆಬೀಜದ ಚೂರ್ಣದ ಜೊತೆ ಜೇನುತುಪ್ಪಸೇವಿಸುವುದರಿಂದ ಬೇಗ ಗುಣವಾಗುವುದು. ಜ್ವರ, ಕ್ರಿಮಿರೋಗ, ಸ್ತ್ರೀರೋಗ ಮತ್ತು ವಾತವ್ಯಾಧಿಗಳಲ್ಲಿ ಉಪಯೋಗಿ. ಒಂದುಚಮಚ ಮೆಂತೆಪುಡಿ ಎರಡರಿಂದ ಮೂರುಬಾರಿ ಸೇವಿಸಿದರೆ ಮಧುಮೇಹ ನಿಯಂತ್ರಣ ವಾಗುವುದು. ಮೆಂತೆಸೊಪ್ಪು ಎಲೆಯ ಆಹಾರವಾಗಿ ಬಳಸಬಹುದು. ಚೂರ್ಣವು ಔಷಧವಾಗಿ ರಕ್ತವರ್ಧಕ, ವಾತರೋಗ, ರಕ್ತಹೀನತೆಯಲ್ಲೂ ಉಪಯೋಗಿ. ಕೂದಲಿನ ಆರೋಗ್ಯಕ್ಕೆ ಮೆಂತೆಬೀಜದ ಪೇಸ್ಟ್ಅನ್ನು ತಲೆಗೆಹಚ್ಚಿ ಒಂದು ಗಂಟೆಯನಂತರ ತಲೆಸ್ನಾನ ಮಾಡಿದರೆ ತಲೆಯಹೊಟ್ಟು ಕಡಿಮೆಯಾಗಿ ತಲೆಯ ಹೊಟ್ಟು ನಿವಾರಿಸುವುದು.

18 18 ಲವಂಗ
18. ಲವಂಗ, ಸಂಸ್ಕೃತ: ದೇವಕುಸುಮ, ದೇವಪುಷ್ಪ, ಶ್ರೀಸಂಗ್ಯ, ಶ್ರೀಪ್ರಸುಣಕ: ಸಸ್ಯಶಾಸ್ತ್ರೀಯಮೂಲ: Syzygium aromaticum (Linn.) Merr. & Perry.
ಕಾರ್ಮಿನೇಟಿವ್;ಉದರವಾಯು ನಿರ್ಮೂಲನೆ, ಹೊಟ್ಟೆಯಲ್ಲಿನ ವಾಯುಉತ್ಪನ್ನತಡೆವುದು, ಜಠರಗರುಳಿನಲ್ಲಿ ಉಂಟಾದ ಗ್ಯಾಸ್/ಅನಿಲ ಹೊರಹಾಕಲು ಲವಂಗವು ಸಹಾಯಕ. ಇನ್ಫ್ಲಮೇಷನ್;ಉರಿಯೂತವು ಕಡಿಮೆಮಾಡಲು ಬಳಸಲಾಗುವುದು. ಆಂಟಿಬ್ಯಾಕ್ಟೀರಿಯಲ್; ಬ್ಯಾಕ್ಟೀರಿಯ ಬೆಳವಣಿಗೆತಡೆದು, ರೋಗಕಾರಕ ಸೂಕ್ಷ್ಮಜೀವಾಣುನಾಶಕ,  ನಂಜುನಿವಾರಕ. ಹೂವಿನಭಾಗ-ಮೋಶನ್-ಸಿಕ್ನೆಸ್: ವಾಕರಿಕೆ ಮತ್ತು ವಾಂತಿನಿವಾರಕ, ಸ್ಟಿಮುಲಂಟ್;ದೇಹದಲ್ಲಿ ದೈಹಿಕ ಅಥವಾ ನರಚಟುವಟಿಕೆ ಉತ್ತೇಜಿಸುವುದು. ಜೀರ್ಣಕಾರಿ, ಹಸಿವು ಹೆಚ್ಚಿಸುವ, ದಂತದ ನೋವಿನಲ್ಲಿ ಲವಂಗದ ಎಣ್ಣೆಯನ್ನು ಹತ್ತಿಯಲ್ಲಿಅದ್ದಿ ಹಲ್ಲುಗಳ ನಡುವೆ ಕಚ್ಚಿಟ್ಟುಕೊಂಡರೆ ಹಲ್ಲುನೋವು ನಿವಾರಿಸುವುದು. ಶಿಲೀಂಧ್ರ/ ಫಂಗಸ್, ಕರುಳಿನಲ್ಲಿರುವ ಕ್ರಿಮಿ,ಶಿಲೀಂಧ್ರ, ಮತ್ತು ರೋಗಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ವ್ಯಾಪಕಶ್ರೇಣಿಯ ಆಂಟಿ-ಮೈಕ್ರೋಬಿಯಲ್; ಬ್ಯಾಕ್ಟೀರಿಯ ಬೆಳವಣಿಗೆಯ ತಡೆದು, ರೋಗಕಾರಕ ಸೂಕ್ಷ್ಮಜೀವಾಣು ನಾಶಕ. ಲವಂಗದ ಎಣ್ಣೆಯು ಭೇಧಿ, ಅತಿಸಾರ ಮತ್ತು ಕರುಳಿನ ಹುಳುಗಳ ನಿರ್ಮೂಲನೆಗೆ ಸಹಕಾರಿ, ಮತ್ತು ಇತರೆ ಜೀರ್ಣ ಸಂಬಂಧೀ ಚಿಕಿತ್ಸೆಯಲ್ಲೂ ಬಳಸಬಹುದು. ಕೆಲಹನಿ ಲವಂಗದೆಣ್ಣೆ ನೀರಿನಲ್ಲಿಹಾಕಿ ಪ್ರಯಾಣದ ಸಮಯದಲ್ಲಿ  ಆಗುವ ವಾಕರಿಕೆ, ವಾಂತಿಯ ತಡೆಯುವುದು. ಲವಂಗವು ಕಾಮೋತ್ತೇಜಕವೂ ಆಗಿದೆ. ಪೆರಿಸ್ಟಾಲ್ಸಿಸ್: ಈಸ್ನಾಯು ಸಂಕುಚನ ದಿಂದಲೇ ಆಹಾರವು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೂಲಕ ಆಹಾರವು ಮುಂದೆಸಾಗಿ ಕರುಳಿನಲ್ಲಿಚಲಿಸುವುದು. ಈ ಚಲನೆಯನ್ನು , ಲವಂಗವು ಉತ್ತೇಜಿಸುವುದು. ಲವಂಗದ ಬಳಕೆಯಿಂದ ಮೂತ್ರಪಿಂಡದ, ಮೂತ್ರಕೋಶಕ್ಕೆ ಸಂಪರ್ಕಿಸುವ ಕೊಳವೆಯಲ್ಲಿ ಪೆರಿಸ್ಟಾಲ್ಸಿಸ್-ಕ್ರಿಯೆಯ ತೋರಿಸುವುದು.

19 19 ವೀಳ್ಯದೆಲೆ
19. ತಾಂಬೂಲ, ನಾಗವಲ್ಲರಿ, ನಾಗಿಣಿ, ತಾಂಬೂಲವಲ್ಲಿ, ಸಪ್ತಶಿರಾ, ಭಹುಜನಗಲತಾ, ವೀಳ್ಯದೆಲೆ, ಸಂಸ್ಕೃತ: ನಾಗವಲ್ಲಿ: ಸಸ್ಯಶಾಸ್ತ್ರೀಯಮೂಲ:  Piper betle Linn.
ವೀಳ್ಯದೆಲೆ-ದೇಹದಲ್ಲಿ ದೈಹಿಕ ಅಥವಾ ನರಸಂಬಂಧಿ ಚಟುವಟಿಕೆಯ ಮಟ್ಟಹೆಚ್ಚಿಸುವ ದ್ರವ್ಯ. ಉದರವಾಯು;ಗ್ಯಾಸ್ ನಿವಾರಕ, ಆಸ್ಟ್ರಿಂಜೆಂಟ್;ವೀಳ್ಯದೆಲೆಯು ಚರ್ಮದಕೋಶಗಳ ಸಂಕುಚನ ಮಾಡುವುದು. ಆಂಟಿಸೆಪ್ಟಿಕ್; ಬಾಹ್ಯವಾಗಿ ನಂಜುನಿರೋಧಕ, ರೋಗಾಣುರೋಧಕ ರೋಗಾಣುಗಳ ನಾಶಮಾಡುವುದು. ಎಲೆಯತೈಲ- ಆಂಟಿಸ್ಪಾಸ್ಮೋಡಿಕ್; ಹೊಟ್ಟೆನೋವಿರುವಾಗ ಕಿಬ್ಬೊಟ್ಟೆಯಸ್ನಾಯು ಅಥವಾ ನೋವಿನ ಸೆಳೆತನಿವಾರಿಸುವುದು. ಆಂಟಿಸೆಪ್ಟಿಕ್;ಬಾಹ್ಯವಾಗಿ ನಂಜುನಿರೋಧಕ ರೋಗಾಣುನಾಶಕ.
ವೀಳ್ಯದೆಲೆತೈಲ:- ರೆಸ್ಪಿರೇಟರಿ ಕ್ಯಾಟರ;ಮೂಗು, ಗಂಟಲಿನ ಉರಿಯೂತದಿಂದ ನೋವಿನಲ್ಲಿ ಸ್ರವಿಸುತ್ತಿರುವ ಲೋಳೆಯನ್ನು ಗುಣಪಡಿಸುವುದು.

20 20 ಶುಂಠಿ
20. ಶುಂಠಿ, ಸಂಸ್ಕೃತ: ಹಸಿಶುಂಠಿ;ಶುಂಠಿ/ಆದ್ರ್ರಕ, ಆದ್ರಿಕಾ, ಶೃಂಗಿಬೇರ, ಶೃಂಗವೇರ, ಕಟುಭದ್ರ,  ಸಸ್ಯಶಾಸ್ತ್ರೀಯಮೂಲ: Zingiber officinale Rosc.
ರೈಙೋಂ;ಪ್ರಕಂದ ಒಣಶುಂಠಿ;ಶುಂಠಿ, ನಾಗರ, ನಾಗರಕ, ಔಷಧ,ಮಹಾಔಷಧ, ವಿಶ್ವ,ವಿಶ್ವಭೇಷಜ, ವಿಶ್ವೌಷಧ.
ಪ್ರಕಂದ: ವಮನವಿರೋಧಿ; ವಾಂತಿಯ ನಿಯಂತ್ರಕ, ಉದರವಾಯು ವಿರೋಧಿ, ಹೈಪೋಕೊಲೆಸ್ಟರಾಲ್ಮಿಕ್; ಒಟ್ಟುಕೊಲೆಸ್ಟ್ರಾಲ್ (ಟಿಸಿ) ಮತ್ತು ಕಡಿಮೆ ಸಾಂದ್ರತೆಯ ಕೊಲೆಸ್ಟ್ರಾಲ್ (ಎಲ್ಡಿಎಲ್-ಸಿ) ಮಟ್ಟಕಡಿಮೆಗೊಳಿಸುವುದು. ಸೂಜನರೋಧಿ;ಉರಿಯೂತ ಕಡಿಮೆ ಮಾಡುವುದು.  ಶುಂಠಿಯು ಆಂಟಿ ಸ್ಪಾಸ್ಮೋಡಿಕ್;ಹೊಟ್ಟೆನೋವಿರುವಾಗ ಕಿಬ್ಬೊಟ್ಟೆಯ ಸ್ನಾಯು ಅಥವಾ ನೋವಿನ ಸೆಳೆತ ನಿವಾರಿಸುವುದು. ಕಫೋತ್ಸಾರಕ, ಕಫನಿಸ್ಸಾರಕ- ಕೆಮ್ಮಿಗೆ ಚಿಕಿತ್ಸೆನೀಡಿದಾಗ ಶ್ವಾಸನಾಳಗಳಲ್ಲಿ ಕಫಸ್ರವಿಸುವಿಕೆ ಉತ್ತೇಜಿಸುವ ದ್ರವ್ಯ, ರಕ್ತ ಪರಿಸಂಚರಣ, ರಕ್ತಪರಿಚಲನೆ ಉತ್ತೇಜಕ, ಸ್ವೇದಕಾರಿ ಸ್ವೇದಜನಕ- ಬೆವರಜನಕ ಬೆವರುವಿಕೆಯ ಪ್ರೇರೇಪಿಸುವುದು. ಶುಂಠಿಯು ಬಯೋಅವೈಲೆಬಿಲಿಟಿ;ಜೈವಿಕ ಲಭ್ಯತೆಹೆಚ್ಚಿಸುವುದು. ಶುಂಠಿಯು ಇರಿಟೆಬಲ್ ಬೊವೆಲ್ಸಿಂಡ್ರೋಂ; ಕೆರಳಿಸುವ ಕರುಳಿನ ಲಕ್ಷಣದಲ್ಲೂ ಉಪಯೋಗಿ.  ಶುಂಠಿಯು ಅತಿಸಾರ, ಶೀತ, ಇನ್ಫ್ಲುಯೆಂಜಾ, ಮೈಗ್ರೇನ್ ತಲೆನೋವಿನಲ್ಲೂ ಉಪಯೋಗಿ, ಒಣಶುಂಠಿಯು ಅಗ್ನಿಮಾಂದ್ಯ, ಅಜೀರ್ಣವನ್ನು ಹೋಗಲಾಡಿಸುವುದು. ರಕ್ತಹೀನತೆ, ಸಂಧಿವಾತ, ಕೆಮ್ಮು ಮತ್ತು ಡಿಸ್ಪ್ನಿಯಾದಲ್ಲೂ ಉಪಯೋಗಿ. ಹಸಿಶುಂಠಿಯು ಕಾನ್ಸ್ಟಿಪೇಶನ್;ಮಲಬದ್ಧತೆಯನ್ನು ನಿವಾರಿಸುವುದು. ಕೋಲಿಕ್;ಕರುಳಿನ ಅನಿಲ ಕರುಳಿನಲ್ಲಿಯ ಅಡಚಣೆಯಿಂದ ಉಂಟಾದ ಹೊಟ್ಟೆಯ ತೀವ್ರತರನಾದಸ್ಥಿತಿ, ಆಗಾಗ್ಗೆ ಏರಿಳಿತದ ನೋವು ಮತ್ತು ವಿಶೇಷವಾಗಿ ಶಿಶುಗಳಲ್ಲಿ ತೊಂದರೆಯಾಗುವುದು. ಎಡಿಮಾ;ದೇಹದಕುಳಿ ಅಥವಾ ಅಂಗಾಂಶಗಳಲ್ಲಿ ಅಧಿಕ ನೀರಿನದ್ರವ ಸಂಗ್ರಹಿಸುವ ಸ್ಥಿತಿ, ಥ್ರೋಟ್ ಇನ್ಫೆಕ್ಷನ್;ಗಂಟಲಿನಸೋಂಕಿನಲ್ಲಿ ಶುಂಠಿ ಉಪಯೋಗಿ. ನೀರಿನಲ್ಲಿ ಅಥವಾ ನಿಂಬೆರಸದಲ್ಲಿ ತೇಯ್ದು ಹಣೆಯ ಭಾಗಕ್ಕೆ ಹಚ್ಹಿದರೆ ತಲೆನೋವು, ನೆಗಡಿಯು ಗುಣಕಾಣುವುದು. ನೀರಿಗೆ ಶುಂಠಿಪುಡಿ, ಧನಿಯಪುಡಿ, ಕುದಿಯುವ ನೀರಿಗೆಹಾಕಿ ಹಬೆಯನ್ನು  ಮೂಗಿನಲ್ಲಿ ಘ್ರಣಿಸಿದರೆ ಕಟ್ಟಿರುವಮೂಗು ಸಡಿಲವಾಗಿ, ನೆಗಡಿ, ತಲೆನೋವು ಗುಣವಾಗುವುದು. ಅರ್ಧಚಮಚ ಶುಂಠಿಪುಡಿ, ಬೆಲ್ಲದ ಜೊತೆ ಬಿಸಿನೀರಿನೊಂದಿಗೆ ಸೇವಿಸಿದರೆ ಅಜೀರ್ಣನಿವಾರಣೆ ಆಗುವುದು. ಸಂಧಿವಾತ, ಅತಿಯಾದ ದೇಹದತೂಕ, ಆಮವಾತ, ಜ್ವರಗಳಲ್ಲಿ  ಶುಂಠಿ ಉತ್ತಮ. ಊಟಕ್ಕೆಮುನ್ನ ಚೂರುಹಸಿ ಶುಂಠಿ- ಸೈಂಧವಲವಣದೊಂದಿಗೆ ಸೇರಿಸಿ ಸೇವಿಸಿದರೆ ಹಸಿವುಹೆಚ್ಚಿ ಜೀರ್ಣಕ್ರಿಯೆ ಉತ್ತಮವಾಗುವುದು. ಶುಂಠಿಯನ್ನು ಮಜ್ಜಿಗೆ ಅಥವಾ ನಿಂಬೆರಸದೊಂದಿಗೆ ಸೇವಿಸಿದರೆ ಅಜೀರ್ಣ, ಅತಿಸಾರ, ನಿವಾರಿಸುವುದು. ಚಿಕ್ಕಮಕ್ಕಳ ಕೆಮ್ಮು-ಕಫ, ಜ್ವರಗಳಲ್ಲಿ ಶುಂಠಿಯನ್ನು ಜೇನುತುಪ್ಪದೊಂದಿಗೆ ನೆಕ್ಕಿಸಿದರೆ ಗುಣಕಾರಿ. ಮುಖ್ಯಉಪಯೋಗ: ಡಿಸ್ಪೆಪ್ಸಿಯಾ;ಜೀರ್ಣಕಾರಿ ಕ್ರಿಯೆಯ ಅಸ್ವಸ್ಥತೆ, ಮತ್ತು ಮೋಶನ್ ಸಿಕ್ನೆಸ್ ತಡೆಯುವುದು;ಗರ್ಭಿಣಿಯರಲ್ಲಿ   ವಾಂತಿಯನ್ನು ತಡೆಯುವುದು. ಅನೊರೆಕ್ಸಿಯಾ; ಲಾಸ್ಆಫ್ಅಪಿಟೈಟ್, ಹಸಿವಿನ ಕೊರತೆನಿವಾರಿಸುವುದು. ಬ್ರಾಂಖೈಟಿಸ್ ಮತ್ತು ರುಮ್ಯಾಟಿಕ್ ಕಂಪ್ಲೇಂಟ್;ಅಸ್ತಮಾ ಮತ್ತು ಆಮವಾತರೋಗದಲ್ಲಿ ಉಪಯೋಗಿ, ಒಣಶುಂಠಿ ಮತ್ತು ಹಸಿಶುಂಠಿಯು ಜೀರ್ಣರಸಗಳ ಸ್ರವಿಕೆಯ ನಿಗ್ರಹಿಸಿ ನಿಯಂತ್ರಿಸಿ ವಾಂತಿ ಕಡಿಮೆಮಾಡುವುದು.

21 21 ಹಿಪ್ಪಲಿ
21. ಹಿಪ್ಪಲಿ, ಸಂಸ್ಕೃತ: ಪಿಪ್ಪಲೀ, ವೈದೇಹಿ, ಉಪ್ಕುಲ್ಯ, ಕೃಷ್ಣಾ, ಉಷ್ಣ, ತೀಕ್ಷ್ಣ, ಮಾಗಧಿಕ, ಮಾಗಧ: ಸಸ್ಯಶಾಸ್ತ್ರೀಯಮೂಲ: Piper longum Linn.
ಹಣ್ಣು-ಉಸಿರಾಟ ಮತ್ತು ಶ್ವಾಸಕೋಶ ಸಂಬಂಧೀ ಕಾಯಿಲೆಯಲ್ಲಿ ಉಪಯೋಗಿ (ಕೆಮ್ಮು. ಬ್ರಾಂಖೈಟಿಸ್;ಶ್ವಾಸನೀಶೋಧ, ಶ್ವಾಸನಾಳದ ಕೊಳವೆಗಳಲ್ಲಿನ ಲೋಳೆಯ ಪೊರೆಯ ಉರಿಯೂತ, ಇದು ಸಾಮಾನ್ಯವಾಗಿ ಬ್ರಾಂಖೋಸ್ಪಾಸ್ಮ್ ಮತ್ತು ಕೆಮ್ಮಿಗೆ ಕಾರಣವಾಗುವುದು.) ಸೆಡೆಟಿವ್;ನಿದ್ರಾಜನಕ (ಇನ್ಸೋಮ್ನಿಯಾ;ಶಾಂತತೆಯ ಉತ್ತೇಜಿಸಿ ನಿದ್ರೆಯನ್ನು ಉತ್ತೇಜಿಸುವ ಔಷಧ. ಅನಿದ್ರೆಯಲ್ಲಿ ಉಪಯೋಗಿ. ಎಪಿಲೆಪ್ಸಿ;ಅಪಸ್ಮಾರ, ಮೆದುಳಿನಲ್ಲಿನ ಅಸಹಜ ವಿದ್ಯುತ್ ಚಟುವಟಿಕೆಗೆ ಸಂಬಂಧಿಸಿದ ಸಂವೇದನಾ ಅಡಚಣೆ, ಪ್ರಜ್ಞೆಕಳೆದುಕೊಳ್ಳುವುದು ಅಥವಾ ಸೆಳವುಗಳ ಹಠಾತ್ ಪುನರಾವರ್ತಿತ ಕ್ರಿಯೆಗಳಿಂದ ಗುರುತಿಸಲ್ಪಟ್ಟ ನರವೈಜ್ಞಾನಿಕ ಕಾಯಿಲೆ.) ಚೋಲಗಾಗ್;ಪಿತ್ತಕೋಶವನ್ನು ನಿರ್ಬಂಧಿಸಲು ಉತ್ತೇಜಿಸುವ ವಸ್ತುವು ಕರುಳಿನಲ್ಲಿ ಪಿತ್ತರಸದ ಹರಿವು ಹಚ್ಚಿಸುವುದು. ಎಮಿನಗಾಗ್; ಹಿಪ್ಪಲಿಯು ಮುಟ್ಟಿನ ಹರಿವನ್ನು ಹೆಚ್ಚಿಸುವುದು.  ಹಿಪ್ಪಲಿಯು ಜೀರ್ಣಕಾರಿ, ಹಸಿವು ಹೆಚ್ಚಿಸಿ, ಶೀತ, ನೆಗಡಿ, ಜ್ವರ, ಅಸ್ತಮಾ;ಉಬ್ಬಸರೋಗವನ್ನು ನಿವಾರಿಸುವುದು. ಒಂದು ಚಿಟಿಕೆ ಹಿಪ್ಪಲಿಚೂರ್ಣವನ್ನು ಜೇನುತುಪ್ಪದೊಂದಿಗೆ ಮಿಶ್ರಣಮಾಡಿ ಸೇವಿಸಿದರೆ ಅಲರ್ಜಿಯ ತೊಂದರೆಯಲ್ಲಿ ಗುಣಕಾರಿ.  ಹಿಪ್ಪಲಿಚೂರ್ಣವು ಉದರವಾಯು;ಗ್ಯಾಸ್-ನಿವಾರಕ ಕಾರ್ಮಿನೇಟಿವ್; ಉದರವಾಯು ನಿರ್ಮೂಲನೆ ಮಾಡುವುದು. ಹೊಟ್ಟೆಯಲ್ಲಾಗುವ ವಾಯು ಉತ್ಪನ್ವನ್ನು ತಡೆದು ಆಹಾರವನ್ನು  ಜೀರ್ಣಮಾಡಲು ಸಹಕರಿಸುವುದು. ಹಿಮಾಟಿನಿಕ್;ರಕ್ತವರ್ಧಕ (ಅನೀಮಿಯಾ, ತೀವ್ರತರಜ್ವರ ಮತ್ತು ಬುದ್ಧಿಯ ಸುಧಾರಿಸುವ ದ್ರವ್ಯ) ಹಿಪ್ಪಲಿಯು, ಸ್ನಾಯುನೋವು ಮತ್ತು ಉರಿಯೂತದ ಜಾಗದಲ್ಲಿ ಚರ್ಮದ ಮೇಲೆ ಹಚ್ಚಿದರೆ ಸಂಧಿವಾತ, ಸಂದುಗಳಲ್ಲಿ ನೀರುತುಂಬಿ ಆಗಿರುವ ಬಾವು/ ಸ್ವೆಲಿಂಗನ್ನು ಕಡಿಮೆ ಮಾಡುವುದು. ಹಿಪ್ಪಲಿಚೂರ್ಣದ ಪುಡಿಯ ಲೇಪಮಾಡಿಯು ಬಳಸಬಹುದು. ನೆಗಡಿಯಾಗಿ ಮೂಗುಕಟ್ಟಿದ್ದರೆ ಹಣೆಯ ಭಾಗಕ್ಕೆ ಲೇಪಿಸಬೇಕು.

ಸೂಚನೆ: ಎಲ್ಲರಿಗೂ ತಿಳಿದಂತೆ ಮನೆಮದ್ದು ಅನೇಕ ವರ್ಷಗಳಿಂದ ಬಳಕೆಯಲ್ಲಿದ್ದು ಮನೆಯಲ್ಲಿ ತಾಯಿಯು ತನ್ನ ಮಗಳಿಗೆ ಹೇಳಿಕೊಟ್ಟು ಈ ಜ್ಞಾನವು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರವಾಗಿ ಪ್ರಸಿದ್ಧಿ ಪಡೆಯುತ್ತಾ, ಮಾಹಿತಿತಂತ್ರಜ್ಞಾನದ ಯುಗದಲ್ಲೂ ನಡೆದಿದೆ. ಅದಕ್ಕೆ ಪೂರಕವಾಗಿ ಮೇಲೆ ಹೇಳಿದ ಮಾಹಿತಿಯನ್ನು ಎಪಿಐ ‘ಆಯುರ್ವೆದಿಕ್ ಫಾರ್ಮಕೋಪಿಯಾ ಆಫ್ ಇಂಡಿಯಾ’  ಪುಸ್ತಕಗಳಲ್ಲಿ ಪ್ರಕಟಿಸಲಾದ ಮಾಹಿತಿಯಾಗಿದೆ. ಸಂದರ್ಭಾನುಸಾರ ಈ ಮಾಹಿತಿಯನ್ನು, ‘ಫಸ್ಟ್ಏಡ್’ನಂತೆ ಬಳಸಬೇಕೇ ಹೊರತು, ಮೆಡಿಕಲ್ ಎಮರ್ಜೆನ್ಸಿ ಮತ್ತು ಇತರೆ ವೈದ್ಯಕೀಯಶಾಸ್ತ್ರಕ್ಕೆ ಸಮಾನಾಂತರವಾಗಿ ಈ ಮಾಹಿತಿಯ ಗ್ರಹಿಕೆ, ಬಳಕೆಬೇಡ. ಸದ್ಯ ಯಾವುದೇ ಆಧುನಿಕ ವೈದ್ಯಕೀಯ ಚಿಕಿತ್ಸೆ ಔಷಧಿಗಳ ಸೇವಿಸುತ್ತಿದ್ದಲ್ಲಿ ಯಾವುದೇ ಕಾರಣಕ್ಕೂ ಅದನ್ನು ನಿಲ್ಲಿಸಬಾರದು. ಒಂದೆರಡು ದಿನದಲ್ಲಿ ಮನೆಮದ್ದು ಚಿಕಿತ್ಸೆಯಿಂದ ಗುಣಕಾಣದೆ, ವ್ಯಕ್ತಿಯ ವೈದ್ಯಕೀಯಸ್ಥಿತಿಯಲ್ಲಿ ಬದಲಾವಣೆ ಆಗದಿದ್ದರೆ ತಕ್ಷಣವೇ ವೈದ್ಯರ ಭೇಟಿ ಸಮಾಲೋಚನೆ ಸಲಹೆ ಪಡೆಯುವುದೊಳ್ಳೆಯದು. ಏಕೆಂದರೆ ಪ್ರತಿಯೊಬ್ಬರ ದೇಹ ಪ್ರಕೃತಿ ಬೇರೆ ಬೇರೆಯಾಗಿದ್ದು ಒಬ್ಬರಿಗೆ ಸ್ಪಂದಿಸಿದ ಉಪಯುಕ್ತ ದ್ರವ್ಯ ಇನ್ನೊಬ್ಬರಿಗೆ ಅನುಪಯೋಗಿ ಆಗಬಹುದು. ಮೇಲೆ ಸೂಚಿಸಿರುವ ಯಾವುದೇ ದ್ರವ್ಯಗಳನ್ನು  ಚಿಕ್ಕಮಕ್ಕಳು ಅಥವಾ ಗರ್ಭಿಣಿ ​​ಸ್ತ್ರೀಯರಲ್ಲಿ ಬಳಸುವಾಗ ತಜ್ಞರೊಂದಿಗೆ ಪರಾಮರ್ಶಿಸಿ ಸಲಹೆ ಪಡೆಯುವುದು ಸೂಕ್ತ. ದ್ರವ್ಯಗಳನ್ನು ಅಡುಗೆಗಳಲ್ಲಿ ಬಳಸಿ ಸೇವಿಸುವುದಕ್ಕಿಂತ ಹಾಗೆಯೇ ಒಣಗಿಸಿದ, ಪುಡಿಮಾಡಿದ ದ್ರವ್ಯಗಳನ್ನು ನೇರವಾಗಿ ಸೇವಿಸಿದರೆ ಹೆಚ್ಚು ಪ್ರಭಾವಶಾಲಿ ಮತ್ತು ಪರಿಣಾಮಕಾರಿ.

Reference:
Indian Medicinal Plants. C.P. Khare (Ed.), An Illustrated Dictionary
With 215 Pictures of Crude Herbs

Author
C.P. Khare, B-1/211, Janak Puri
New Delhi-110058

India Library of Congress Control Number: 2007922446
ISBN: 978-0-387-70637-5 Springer-Verlag Berlin/Heidelberg
Ayurvedic synonyms have been selected from the following sources:
• The Ayurvedic Pharmacopoeia of India (Vol. I to IV).
• Standard Nomenclature of Ayurvedic Medicinal Plants (CCRAS, 1999).
• Medicinal Plants used in Ayurveda (Rashtriya Ayurveda Vidyapeeth/ National Academy of Ayurveda, 1998).
• Plants of Sharangadhara Samhita by Prof. K.C. Chunekar and Dr. K. Pondel (National Academy of Ayurveda, 1999).

Key Words: ಮನೆಮದ್ದು, ಗೃಹವೈದ್ಯ, #ಮನೆಮದ್ದು, #ಗೃಹವೈದ್ಯ, #ಮನೆಮದ್ದು,

घरेलू उपचार, रसोई के उपाय, घरेलू सामान, #घरेलूउपचार, #रसोईकेउपाय, #घरेलूसामान,

Home Remedies, Kitchen Remedies, #homeremedies #kitchenremedies 

Leave a Reply

Your email address will not be published. Required fields are marked *